

ಕೋಟ: ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧರಾದ ಇಲ್ಲಿನ ಕೋಟ ಗ್ರಾ.ಪಂ. ವ್ಯಾಪ್ತಿಯ ಮಣೂರು ಪಡುಕರೆಯ ನಿವಾಸಿ ಸುರೇಶ್ ಮರಕಾಲ ಕುಟುಂಬಕ್ಕೆ ಸಮಾಜಸೇವಕ ಆನಂದ್ ಸಿ.ಕುಂದರ್ ತಮ್ಮ 77ನೇ ಹುಟ್ಟು ಹಬ್ಬದ ಅಂಗವಾಗಿ ಮನೆ ನಿರ್ಮಿಸಿ ಬಡ ಕುಟುಂಬಕ್ಕೆ ಆಸೆರೆಯಾದರು. ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ್ ಸಿ.ಕುಂದರ್ ಮನೆಯ ಕೀ ಹಸ್ತಾಂರತರಿಸಿ ದೀಪ ಬೆಳಗಿಸಿದರು. ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಕೋಟ ಗ್ರಾಪಂ ಸದಸ್ಯ ಪ್ರದೀಪ್ ಸಾಲಿಯಾನ್, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಸುರೇಶ್ ಮರಕಾಲ, ಪತ್ನಿ ಸವಿತಾ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ್ ಸಿ.ಕುಂದರ್ ಮನೆಯ ಕೀ ಹಸ್ತಾಂರತರಿಸಿ ದೀಪ ಬೆಳಗಿಸಿದರು. ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಕೋಟ ಗ್ರಾಪಂ ಸದಸ್ಯ ಪ್ರದೀಪ್ ಸಾಲಿಯಾನ್ ಇದ್ದರು.