ಕರಕುಶಲತೆಯ ಚೈತನ್ಯಮೂರ್ತಿ ಭಗವಾನ್ ವಿಶ್ವಕರ್ಮ

mlk Jayanthi Sep--17
Published on

ಮೊಳಕಾಲ್ಮೂರು : ಆಭರಣಗಳ ಕರಕುಶಲತೆಯ ಚೈತನ್ಯಮೂರ್ತಿ ಭಗವಾನ್ ವಿಶ್ವಕರ್ಮರು ವಾಸ್ತು ಶಿಲ್ಪಕಲೆಯಲ್ಲಿ ಕಾಯಕವೆ ಕೈಲಾಸ ಎಂಬ ತತ್ವದಡಿ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಿಕ್ಷಕ ರಾಘವೇಂದ್ರಾಚಾರ್ ತಿಳಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಬುಧ ವಾರ ಹಮ್ಮಿಕೊಂಡಿದ್ದ ವಿರಾಟ್ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜ ತನ್ನದೆ ಆದ ನೈಪುಣ್ಯತೆಯಿಂದ ವೃತ್ತಿ ಜೀವನ ರೂಪಿಸಿಕೊಂಡಿದೆ. ಇತ್ತೀಚಿನ ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕತೆಯ ವೈಭವೀಕರಣದಲ್ಲಿ ಆಭರಣಗಳ ತಯಾರು ಮತ್ತು ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದರು.

ಜನಾಕರ್ಷಣೆಗೆ ಬಂಡವಾಳಶಾಹಿಗಳು ಹಲವು ರೀತಿ ಪೈಪೋಟಿ ನೀಡುತ್ತಿರುವುದು ಸಣ್ಣ ವ್ಯಾಪಾರಿಗಳ ಜೀವನ ಕಷ್ಟವಾಗಿದೆ. ಪ್ರಸ್ತುತ ಬದಲಾವಣೆ ಕಾಲ ಘಟ್ಟದಲ್ಲಿ ವೃತ್ತಿ ಬದುಕಿನ ಜತೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮೂಲಕ ಅವರ ಉಜ್ವಲ ಭ ವಿಷ್ಯಕ್ಕೆ ಜನಾಂಗ ಜಾಗೃತರಾಗಬೇಕು. ಸರ್ಕಾರ. ಸಣ್ಣ ಸಮಾಜವನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ಕೊಡಬೇಕು ಎಂದರು.

ನಿವೃತ್ತ ಶಿಕ್ಷಕ ಸುರೇಶಾಚಾರ್ ಮಾತನಾಡಿ, ಕಾಯಕ ತತ್ವದಡಿ ಜಗತ್ತಿಗೆ ಬೆಳಕಾಗಿದ್ದ ವಿಶ್ವಕರ್ಮರ ಕೊಡುಗೆ ಅಪಾರ. ನಾವು ಕುಲಕಸುಬಿಗೆ ಸೀಮಿತವಾಗದೆ ಜೀವನ ಸುಧಾರಣೆಗೆ ದುಡಿಮೆಯ ಮಾರ್ಗ ಅನುಸರಿಸುವ ಅನಿವಾರ್ಯತೆ ಇದೆ. ಇದಕ್ಕೆ ಪೂರಕವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ವಿ.ಟಿ. ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ಎ.ಯಲ್ಲಪ್ಪ ಆಚಾರ್, ಕೆ.ಸತ್ಯನಾರಾಯಣ, ವಿಜಯಕುಮಾರ, ನಾಗವೇಣಿ, ವಿ. ವಸಂತಕುಮಾರ, ನಾಗೇಂದ್ರಾಚಾರ್, ಎ.ಕಾಂತರಾಜ, ಟಿ. ಮೋಹನಾಚಾರ್, ಬ್ರಹ್ಮಾಚಾರ್, ಸಂತೋಷ್, ಬಿ.ಎಸ್. ನಾಗರಾಜ, ಶಿವಕುಮಾರಾಚಾರ್, ಅಂಜನಾಚಾರ್ ಇತರರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net