ಶಾಲೆಗೆ ಕೈ ತೊಳೆಯುವ ಘಟಕ ಹಸ್ತಾಂತರ

hastantara
ಅಮೆರಿಕ ನಿವಾಸಿ ಡಾ.ದಿನಕರ್ ಶೆಟ್ಟಿ ಅವರು ಪ್ರಾಯೋಜಿಸಿದ ಕೈ ತೊಳೆಯುವ ಘಟಕ ಹಸ್ತಾಂತರಿಸಲಾಯಿತು.
Published on

ಕುಂದಾಪುರ: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕುಂದಾಪುರದ ಇಂಡಿಯನ್ ರೆಡ್‌ಕ್ರಾಸ್ ಘಟಕದ ವತಿಯಿಂದ ಅಮೆರಿಕ ನಿವಾಸಿ ಡಾ.ದಿನಕರ್ ಶೆಟ್ಟಿ ಅವರು ನೀಡಿದ ಕೈ ತೊಳೆಯುವ ಘಟಕವನ್ನು ಗುರುವಾರ ಹಸ್ತಾಂತರಿಸಲಾಯಿತು.

ಕುಂದಾಪುರ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಕೈ ತೊಳೆಯುವ ಘಟಕವನ್ನು ಶಾಲೆಗೆ ಹಸ್ತಾಂತರಿಸಿದರು. ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೆಡ್‌ಕ್ರಾಸ್ ಘಟಕದ ಸಂಯೋಜಕ ದಿನಕರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲೆಯ ಜೂನಿಯರ್ ರೆಡ್‌ಕ್ರಾಸ್ ಘಟಕದ ಅಧ್ಯಕ್ಷೆ ರಕ್ಷಾ ಮತ್ತು ಕಾರ್ಯದರ್ಶಿ ಪಂಚಮಿ ಅವರಿಗೆ ಪದ ಪ್ರದಾನ ಮಾಡಲಾಯಿತು. ಇಂಡಿಯನ್ ರೆಡ್‌ಕ್ರಾಸ್ ಘಟಕದ ವತಿಯಿಂದ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನೀಡಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಶಿವರಾಮ ಶೆಟ್ಟಿ, ಶಾಲೆಯ ಶಿಕ್ಷಕರು, ಶಿಕ್ಷಕೇತರರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲೆಯ ಜೂನಿಯರ್ ರೆಡ್‌ಕ್ರಾಸ್ ಘಟಕದ ನೋಡಲ್ ಶಿಕ್ಷಕ ಶ್ರೀಕಾಂತ್ ವಿ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ರಮಾನಂದ ನಾಯಕ್ ನಿರೂಪಿಸಿದರು. ಪಂಚಮಿ ವಂದಿಸಿದರು.

Hand washing unit handed over to school

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net