ಹಂಪಿ ಉತ್ಸವದಲ್ಲಿ ಗಾಯಕ ವಾಸುಕಿ ಗಾನ ವೈಭವ

Hampi Utsav Vasuki Vaibhav
ವಾಸುಕಿ ವೈಭವ್.
Published on

ಹಂಪಿ: ಎಂ.ಪಿ.ಪ್ರಕಾಶ ಪ್ರಧಾನ ವೇದಿಕೆಯಲ್ಲಿ ಶನಿವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಸಿನಿಮಾ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಗಾಯನ ವೈಭವ ಕಂಡು ಬಂತು.

ಸಹಿಪ್ರಾ ಶಾಲೆ ಕಾಸರಗೋಡು ಚಿತ್ರದ ಪ್ರಸಿದ್ಧ ಗೀತೆ ’ಅರೆರೇ ಅವಳ ನಗುವ’ ಹಾಡಿನ ಮೂಲಕ ವಾಸುಕಿ ವೈಭವ್ ಗಾಯನ ಆರಂಭಿಸಿದರು. ಪ್ರಸಿದ್ಧ ರಂಗಗೀತೆ ’ಮೈಸೂರು ರಾಜ್ಯದ ದೊರೆಯೇ’ ಪ್ರಸ್ತುತ ಪಡಿಸಿದರು. ಜನಪದ ಸೊಗಡಿನ ‘ಸಾವಿರ ಶರಣವ್ವ ಕರಿಮಾಯಿ ತಾಯಿ’ ಗೀತೆಯನ್ನು ಸಹಚರರೊಂದಿಗೆ ಹಾಡಿ ಜನರ ಮೆಚ್ಚುಗೆ ಗಳಿಸಿದರು.

ರಾತ್ರಿಯ ಹಿತವಾದ ಚಳಿಯಲಿ ‘ಮುಂದಿನ ನಿಲ್ದಾಣ’ ಚಿತ್ರದ ‘ಇನ್ನೂ ಬೇಕಾಗಿದೆ’ ಗೀತೆ ಸಭಿಕರಿಗೆ ಬೆಚ್ಚಗಿನ ಅನುಭವ ನೀಡಿತು. ಕಿರಿಕ್ ಪಾರ್ಟಿ ಚಿತ್ರದ ’ಕಾಗದದ ದೋಣಿಯಲಿ’ ಗೀತೆ ಭಗ್ನ ಪ್ರೇಮಿಗಳ ಕಣ್ಣಂಚಲ್ಲಿ ನೀರು ತರಿಸಿತು.

ಪುನೀತ್ ರಾಜ್ ಕುಮಾರ್ ಹಾಡಿದ ‘ಕಾಣದಂತೆ ಮಾಯವಾದನು’, ಬಡವ ರಾಸ್ಕಲ್ ಸಿನಿಮಾದ ಶೀರ್ಷೀಕೆ ಗೀತೆ ಹಾಗೂ ಆಲ್ಬಮ್ ಗೀತೆ ‘ಮನಸ್ಸಿನಿಂದ ಯಾರು ಕೆಟ್ಟವರಲ್ಲ’ ಗೀತೆಗಳಿಗೆ ಜನ ಸ್ಪಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net