ಮಾನವೀಯತೆ ಮೆರೆದ ಪ್ರವಾಸಿ ಮಾರ್ಗದರ್ಶಿ

Bag Gave back
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಬ್ಯಾಗ್ ಕಳೆದುಕೊಂಡಿದ್ದ ಮುಂಬೈ ಮೂಲದ ಯುವತಿ ಶೃತಿ ಶಾ ಗೆ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ, ಪೊಲೀಸ್ ಪೇದೆ ಅಂಜಿನಪ್ಪ, ದೇವಸ್ಥಾನದ ಸಿಬ್ಬಂದಿ ನಾಗರಾಜ್ ಬ್ಯಾಗ್ ನೀಡಿದರು.
Published on

ಹೊಸಪೇಟೆ: ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಬ್ಯಾಗ್ ಕಳೆದುಕೊಂಡಿದ್ದ ಮುಂಬೈ ಮೂಲದ ಯುವತಿ ಶೃತಿ ಶಾ ಎಂಬುವರಿಗೆ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ ಹುಡುಕಿ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಆವರಣವನ್ನು ಸ್ವಚ್ಛತೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿದ್ದ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿಗೆ ಮೊಬೈಲ್, ಎಟಿಎಂ, ನಗದು ಸೇರಿ ದಾಖಲಾತಿವೊಳ್ಳ ಬ್ಯಾಗ್ ಸಿಕ್ಕಿದೆ. ಕೂಡಲೇ ಸಾಮಾಜಿಕ ಜಾಲತಾಣ ಹಾಗೂ ದೇವಸ್ಥಾನದ ಸಿಬ್ಬಂದಿ, ಸುತ್ತಮುತ್ತಲಿನ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ಹಂಚಿಕೊAಡಿದ್ದಾರೆ.

ಯಾರಾದರೂ ಬ್ಯಾಗ್ ಕಳೆದುಕೊಂಡಿದ್ದೀರಾ? ಯಾರಾದೂ ಕಳೆದುಕೊಂಡರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪ್ರವಾಸಿಗರನ್ನೂ ಸೇರಿ ಸ್ಥಳೀಯರಿಗೂ ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆ ನಂತರ ಬಂದ ಬ್ಯಾಗ್ ಕಳೆದು ಕೊಂಡ ಯುವತಿಗೆ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ ಬ್ಯಾಗ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net