

ಮೂಲ್ಕಿ: ಇಲ್ಲಿನ ಪಂಜಿನಡ್ಕ ಕಿನ್ನಿಗೋಳಿ ಸಂಪರ್ಕ ರಸ್ತೆ ಬಲೆಪು ಎಳತ್ತೂರು ಬಳಿ ಅಮೃತ್ 2.0 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದ ಹೊಂಡಗುಂಡಿಗಳ ಆಗರವಾಗಿ ವಾಹನ ಹಾಗೂ ಪಾದಾಚಾರಿಗಳ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಪೈಪ್‌ಲೈನ್‌ಗೆ ತೋಡಿದ ಹೊಂಡ ಪೈಪ್ ಹಾಕಿ ಮುಚ್ಚದೆ ಇರುವುದು ಮಳೆ ನೀರು ಹಾಗೂ ಕೆಸರು ತುಂಬಿಕೊಂಡು ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅರೆಬರೆ ಕಾಮಗಾರಿಯಿಂದ ಮಳೆಯ ನೀರು ಹರಿದುಹೋಗುವ ಚರಂಡಿ ಮುಚ್ಚಿ ಹೋಗಿದ್ದು ರಸ್ತೆಯಲ್ಲಿ ನೀರು ಹರಿದು ಭಾರಿ ಗಾತ್ರದ ಹೊಂಡಗಳು ಉಂಟಾಗಿ ಸಂಚಾರ ಅಪಾಯಕಾರಿಯಾಗಿದೆ.
ಕೆಲ ಕಡೆಗಳಲ್ಲಿ ರಸ್ತೆಯ ಅಂಚು, ಮಳೆ ನೀರು ಹರಿಯುವ ಮೋರಿ ಕುಸಿತದ ಭೀತಿಯಲ್ಲಿದೆ. ಈ ಬಗ್ಗೆ ಅತಿಕಾರಿಬೆಟ್ಟು ಗ್ರಾಮಸಭೆಯಲ್ಲಿ ಸ್ಥಳೀಯ ವಾರ್ಡ್ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರೂ ಸಂಬಂಧಿತ ಅಧಿಕಾರಿವರ್ಗ ಹಾಗೂ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿರುವ ಗುಂಡಿಗಳಿರುವ ಕಾರಣ ವಾಹನ ಸಂಚಾರ ಮತ್ತು ದ್ವಿಚಕ್ರ ವಾಹನಗಳಲ್ಲಿ ಹೋಗುವುದು ಕೂಡ ಬಹಳ ಅಪಾಕಾರಿಯಾಗಿದೆ. ರಾತ್ರಿ ದಾರಿದೀಪಗಳಿಲ್ಲದೆ ಸಂಚರಿಸುವುದು ಬಹಳ ಅಪಾಯ. ಕೃಷ್ಣ ಪ್ರಸಾದ್ ರಿಕ್ಷಾ ಚಾಲಕರು