

ತುಮಕೂರು: ತಾಲೂಕಿನ ಕಸಬಾ ಹೋಬಳಿ ಹಾಲನೂರು ಗ್ರಾಮದ ಪುರಾಣಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಾದೇವಿ ಬ್ರಹ್ಮರಥೋತ್ಸವ ಏ.10 ರಂದು ನಡೆಯಲಿದ್ದು,ರಥ ಹಾಗೂ ದೇವಸ್ಥಾನಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದೆ.
ತ್ರಯೋದಶಿ ಗುರುವಾರ ಮಧ್ಯಾಹ್ನ 12.-45 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮಿಗಳಿಂದ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಲಿದ್ದು ದೇವಾಲಯದ ಆಗಮಿಕರಾದ ಎಚ್.ಆರ್.ವಿರೇಶ್ ಕುಮಾರ್ ಅವರಿಂದ ಹೆಲಿಕ್ಯಾಪ್ಟರ್ ಸೇವೆ ನಡೆಯುತ್ತಿದೆ.
11 ರಂದು ಸಂಜೆ ಅಡ್ಡಪಲ್ಲಕ್ಕಿ ಉತ್ಸವ ಅದಲಾಪುರ ಮಹಾಲಕ್ಷಿ$್ಮ ದೇವಿ ಮೆರವಣಿಗೆ ನಡೆಯಲಿದೆ. 12 ರಂದು ಹುಣ್ಣಿಮೆ ಶನಿವಾರದಂದು ಜಾತ್ರೆಯ ಮುಖ್ಯ ಆಕರ್ಷಣೆ ಉಪ್ಪರಿಗೆ ವಾಹನ ಉತ್ಸವ ನಡೆಯಲಿದ್ದು,ಅಂದು ರಾತ್ರಿ ಶ್ರೀ ಮಲ್ಲೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ ಇರಲಿದೆ.