ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ

Untitled design (16)
ಹಗರಿಬೊಮ್ಮನಹಳ್ಳಿ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಜಯಗೊಳಿಸಿದ ವಿಜಯನಗರ ಕ್ರಿಕೆಟ್ ಕ್ಲಬ್ ತಂಡಕ್ಕೆ ಕಪ್ ಜತೆಗೆ ನಗದು ಬಹುಮಾನ ವಿತರಿಸಲಾಯಿತು. ಸಿಪಿಐ ವಿಕಾಸ್ ಲಮಾಣಿ, ಎಚ್.ಕೊಟ್ರೇಶ್, ಅಬ್ದುಲ್ ಗಫರ್ ಖಾನ್, ವಕೀಲ ಚಂದ್ರಶೇಖರ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ದೈಹಿಕ ಸಧೃಡತೆಗೆ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ ಎಂದು ಸಿಪಿಐ ವಿಕಾಸ್ ಪಿ.ಲಮಾಣಿ ಹೇಳಿದರು.
ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಆವರಣದಲ್ಲಿ ಸಿನೀಯರ್ ಕ್ರಿಕೆಟರ್ಸ್‌ ತಂಡದಿಂದ ಇತ್ತೀಚೆಗೆ ಏರ್ಪಡಿಸಿದ್ದ 35 ವರ್ಷ ಮೇಲ್ಪಟ್ಟ ವಯಸ್ಕರರಿಗೆ ಕ್ರಿಕೆಟ್ ಟೂರ್ನಾಮೆಂಟ್ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ದಿನನಿತ್ಯದ ಕೆಲಸದಿಂದಾಗಿ ಮಾನಸಿಕ, ಬೌದ್ಧಿಕವಾಗಿ ಒತ್ತಡದಿಂದಾರಬೇಕಾಗುತ್ತದೆ. ಇದಕ್ಕೆ ಕ್ರೀಡೆ ಆಯೋಜನೆ ಸೂಕ್ತವಾಗಿದೆ ಎಂದರು.

ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಫೈನಲ್ಸ್‌ನಲ್ಲಿ ಜಯಗಳಿಸಿದ ವಿಜಯನಗರ ಕ್ರಿಕೆಟ್ ಕ್ಲಬ್ ತಂಡಕ್ಕೆ ಕಪ್, ನಗದು ಬಹುಮಾನ ವಿತರಣೆ ಮಾಡಲಾಯಿತು. ಸಿಪಿಐ ವಿಕಾಸ್ ಪಿ.ಲಮಾಣಿ ನೇತೃತ್ವದಲ್ಲಿ ಪೊಲೀಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ಲಬ್ ತಂಡದ ತುಳಸಿರಾಮ್ ಕಠಾರೆ ಪಂದ್ಯ ಪುರುಷೋತ್ತಮ ಹಾಗೂ ಸಿಪಿಐ ವಿಕಾಸ್ ಲಮಾಣಿ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದರು.

ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಎಂ.ರಾಮ್‌ರೆಡ್ಡಿ, ಎಚ್.ಎಂ.ಬಸವರಾಜ್, ಶಿವಾನಂದ್, ಸಿನಿಯರ್ಸ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಎಚ್.ಕೊಟ್ರೇಶ್, ಉಪಾಧ್ಯಕ್ಷ ಅಬ್ದುಲ್ ಗಫರ್‌ಖಾನ್, ಸದಸ್ಯರಾದ ಅಕ್ಬರ್ ತೆಲಗಿ, ರುದ್ರಮುನಿ, ವಕೀಲ ಎ.ಚಂದ್ರಶೇಖರ್, ವಸಂತ್, ಅಕ್ಬರ್, ರಾಜು, ದಾದಾಪೀರ್, ಮುಕ್ತಿಯಾರ್, ಉಸ್ಮಾನ್, ವೀರೇಶ್, ಸಂದೀಪ್, ವೆಂಕಟೇಶ, ಮುತ್ತುರಾಜ್ ಇತರರಿದ್ದರು. ಟೂರ್ನಿಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ತಂಡಗಳು ಹಾಗೂ ಕ್ರಿಕೆಟ್ ಕ್ಲಬ್ ಆಟಗಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net