More

    ಸತತ ಎರಡನೇ ವರ್ಷ ಚೀನಾ ಜನಸಂಖ್ಯೆ ಕುಸಿತ: ಇದರ ಹಿಂದಿನ ಕಾರಣ?

    ನವದೆಹಲಿ: ಒಂದೆಡೆ, ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುವತ್ತ ವೇಗವಾಗಿ ಸಾಗುತ್ತಿದೆ. ಆದರೆ ಇದೀಗ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ಜನಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿದೆ.

    ಹೌದು, ಸತತ ಎರಡನೇ ವರ್ಷ ಚೀನಾದ ಜನಸಂಖ್ಯೆಯು ಇಳಿಮುಖವಾಗಿದೆ. ಚೀನಾದಲ್ಲಿ ಕೋವಿಡ್-19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಸಾವಿನ ಪ್ರಮಾಣ ಹೆಚ್ಚಳವಾಗಿದೆ. ಅಂತೆಯೇ ಜನನ ದರ ಇಳಿಕೆಯಾಗಿದೆ. 2023 ರಲ್ಲಿ ಜನಸಂಖ್ಯೆಯು 20 ಲಕ್ಷದಷ್ಟು ಕಡಿಮೆಯಾಗಿದೆ. ಅಲ್ಲಿಗೆ ಚೀನಾದಲ್ಲಿ ಸತತ ಎರಡನೇ ವರ್ಷ ಜನಸಂಖ್ಯೆ ಇಳಿಮುಖವಾಗಿದೆ.

    ಚೀನಾದ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ದೇಶದ ಒಟ್ಟು ಜನಸಂಖ್ಯೆ 1.4 ಬಿಲಿಯನ್ ಎಂದು ಹೇಳಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಏಕಾಏಕಿ ಸಾವಿನ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುವ ಭೀತಿಯನ್ನು ಜನಸಂಖ್ಯಾಶಾಸ್ತ್ರಜ್ಞರು ಹೊಂದಿದ್ದರು. ಆದರೆ ಜನನ ದರದಲ್ಲಿನ ಇಳಿಕೆಯು ಚೀನಾಕ್ಕೆ ಆರ್ಥಿಕ ಮತ್ತು ಸಾಮಾಜಿಕ ಸವಾಲಾಗಿದೆ. ಇದು ಉದ್ಯೋಗಿಗಳ ಕುಸಿತಕ್ಕೆ ಕಾರಣವಾಗಿ ಕಾಲಾನಂತರದಲ್ಲಿ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಬಹುದು.

    ಜನನ ಪ್ರಮಾಣ ಸತತ ಏಳನೇ ವರ್ಷಕ್ಕೆ ಕುಸಿದಿದೆ. ಹೌದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ವರ್ಷ ಸುಮಾರು 90 ಲಕ್ಷ ಮಕ್ಕಳು ಜನಿಸಿದ್ದರು. ‘ಒಂದೇ ಮಗು’ ಎಂಬ ನೀತಿಯನ್ನು ಅಳವಡಿಸಿಕೊಂಡು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಚೀನಾ ಪ್ರಯತ್ನಿಸಿತ್ತು, ಆದರೆ ಅದರಿಂದಾಗಿಯೇ ಈಗ ವಿಭಿನ್ನ ಸಮಸ್ಯೆಯನ್ನು ಎದುರಿಸುತ್ತಿದೆ.

    ಪ್ರಸ್ತುತ ಇಲ್ಲಿನ ಜನರು ತಡವಾಗಿ ಮದುವೆಯಾಗುತ್ತಿದ್ದಾರೆ. ಅನೇಕರು ಮಕ್ಕಳಾಗದಿರಲು ನಿರ್ಧರಿಸುತ್ತಿದ್ದಾರೆ. ಇದಲ್ಲದೇ ಶಿಕ್ಷಣ ಮತ್ತು ಪೋಷಣೆಗೆ ಹೆಚ್ಚಿನ ವೆಚ್ಚ ತಗಲಿರುವುದರಿಂದ ಒಂದೇ ಮಗು ಎಂಬ ನೀತಿಯನ್ನು ಬಹುತೇಕರು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. 

    ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನಾಂಕ ಗೊತ್ತಿತ್ತೇ?

    ಮಿಲಿಟರಿ ಶಕ್ತಿಯಲ್ಲಿ ಅಮೆರಿಕ ನಂಬರ್ ಒನ್, ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts