ಲೋಕಲ್​ ಫೈಟ್​: ಶಾಸಕರ ಸಹೋದರಿಗೆ ಗೆಲುವು

gp election kallahalli
Published on

ಹೊಸಪೇಟೆ (ಬಳ್ಳಾರಿ): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್ ಅವರ ಸಹೋದರಿ ಗೆಲುವಿನ ನಗೆ ಬೀರಿದ್ದಾರೆ.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂನ ಮೂರನೇ ವಾರ್ಡ್​ನಿಂದ ಭೀಮಾನಾಯ್ಕ್ ಅವರ ಸಹೋದರಿ ಶಕುಂತಲಾ ಭೀಮಾನಾಯ್ಕ್ ಅವರು 509 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಕಲ್ಲಹಳ್ಳಿ ಗ್ರಾಪಂಗೆ 26 ವರ್ಷಗಳಿಂದ ಅವಿರೋಧ ಆಯ್ಕೆಯೇ ಆಗುತಿತ್ತು. ಈ ಬಾರಿ ಚುನಾವಣೆ ನಡೆಯುವ ಮೂಲಕ ಅವಿರೋಧ ಆಯ್ಕೆಗೆ ತಿಲಾಂಜಲಿ ಹಾಡಲಾಗಿದೆ. ಸಾಂಪ್ರದಾಯಿಕ ಅವಿರೋಧ ಆಯ್ಕೆಗೆ ಸೆಡ್ಡು ಹೊಡೆದ ಯುವಜನತೆ ಗೆದ್ದು ಬೀಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net