ಎಚ್​. ವಿಶ್ವನಾಥ್​ಗೆ ಮೇಲ್ಮನೆ ಟಿಕೆಟ್ ಕೈ ತಪ್ಪಿದ್ದರ ಕುರಿತು ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟನೆ

19_st_somashekar
Published on

ತುಮಕೂರು: ಎಚ್​. ವಿಶ್ವನಾಥ್​ಗೆ ಮೇಲ್ಮನೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ತುಮಕೂರಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಮಾತನಾಡಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬಳಿ ಈ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ಮುಂದಿನ ಬಾರಿ ಅವಕಾಶ ಕೊಡ್ತಿವಿ ಎಂದಿದ್ದಾರೆ. ಹೈಕಮಾಂಡ್ ಕೂಡ ಮುಂದಿನ ಬಾರಿ ಅವಕಾಶ ಕೊಡ್ತಿವಿ ಎಂದಿದೆ. ಪ್ರತಾಪ್ ಗೌಡ ಪಾಟೀಲ್, ಮುನಿರತ್ನಂ ಮುಂದಿನ ಚುನಾವಣೆಗೆ ನಿಲ್ಲುತ್ತಾರೆ. ಮುಖ್ಯಮಂತ್ರಿಗಳು ಕೋರ್ ಕಮಿಟಿಯಲ್ಲಿ ವಿಶ್ವನಾಥ್ ಹೆಸರನ್ನು ಶಿಫಾರಸು ಮಾಡಿದ್ದರು ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ರನ್ನು ಬಿಜೆಪಿ ಶಾಸಕರು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿ, ಕಟೀಲ್​ರನ್ನು ಭೇಟಿ ಮಾಡಿದಾಗ ನಾನು ಸಹ ಇದ್ದೆ. ಕೋವಿಡ್ ಹಿನ್ನಲೆಯಲ್ಲಿ ಕೇಂದ್ರದಿಂದ ಬರುವ ಅನುದಾನ ಕೊಡಿಸಿ ಎಂದು ರಾಜ್ಯಾಧ್ಯಕ್ಷರ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು ಹೊರತು ಬೇರೇನು ಇಲ್ಲವೆಂದು ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಮೂರು ವರ್ಷದ ಬಾಲಕ 29ನೇ ಮಹಡಿಯಿಂದ ಬಿದ್ದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net