More

    ಕುಟುಂಬದೊಳಗೆ ಕರೊನಾ ಸುಲಭವಾಗಿ ಹರಡುತ್ತೆ: ಅಧ್ಯಯನ ವರದಿಯಲ್ಲಿದೆ ಸ್ಪೋಟಕ ಮಾಹಿತಿ

    ನವದೆಹಲಿ: ಜಾಗತಿಕವಾಗಿ ಹರಡಿರುವ ಮಹಾಮಾರಿ ಕರೊನಾ ವೈರಸ್​ ಕುಟುಂಬದೊಳಗೆ ರೋಗ ಲಕ್ಷಣವಿಲ್ಲದಿದ್ದರೂ ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾಗತಿಕ ಅಂದಾಜಿನ ಪ್ರಕಾರ ಮನೆಯೊಳಗೆ ಸಾಂಕ್ರಾಮಿಕ ರೋಗಲಕ್ಷಣವಿಲ್ಲದ ಹರಡುವಿಕೆಯನ್ನು ಪ್ರಮಾಣೀಕರಿಸಲಾಗಿದೆ.

    ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ವ್ಯಕ್ತಿಯಲ್ಲಿ ಕರೊನಾ ಸೋಂಕು ಇರುತ್ತದೆ. ಆನಂತರ ಆತ ರೋಗಕ್ಕೆ ಒಳಗಾಗುವ ಮುಂಚೆಯೇ ಕುಟುಂಬದಲ್ಲಿಯೂ ವೈರಸ್​ ವೇಗವಾಗಿ ಹರಡಿರುತ್ತದೆ. ಅದರಲ್ಲೂ 60 ವರ್ಷ ವಯಸ್ಸಿನವರಿಗೆ ಹೆಚ್ಚು ಅಪಾಯವಿದೆ ಎಂದು ಅಧ್ಯಯನ ತಿಳಿಸಿದೆ. ಲ್ಯಾನ್ಸೆಟ್​ ಸಾಂಕ್ರಾಮಿಕ ರೋಗ ಜನರ್ಲ್​ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. ಇದನ್ನೂ ಓದಿ: 40ರ ವೈದ್ಯನನ್ನು ಹನಿಟ್ರ್ಯಾಪ್​ಗೆ ಕೆಡವಿದ್ದ​ ಆರೋಪಿಗಳ ಬಂಧನ: ಲವರ್​ಗೆ ಯುವತಿ ಸಾಥ್​, ಸಂಚು ಬಯಲು

    ಸೋಂಕು ಕುಟುಂಬದೊಳಗೆ ಪ್ರಸರಣವಾಗುವ ಸರಪಳಿಯನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚಿ, ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್​ ಮಾಡುವ ಮೂಲಕ ಹೊಸ ವೈರಸ್​ ಹುಟ್ಟನ್ನು ತಡೆಯಬಹುದೆಂದು ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ಸಂಶೋಧಕರು 13 ಮಿಲಿಯನ್​ ಜನರಿರುವ ಚೀನಾದ ಗೌಂಗ್​ಜೌ ನಗರದ 349 ಕೋವಿಡ್​ -19 ರೋಗಿಗಳು ಹಾಗೂ ಅವರ ಸಂಪರ್ಕದಲ್ಲಿದ್ದ 1964 ಮಂದಿಯ ಡೇಟಾವನ್ನು ಅಧ್ಯಯನ ಮಾಡಿದ್ದಾರೆ. ಈ ಡೇಟಾದಲ್ಲಿ ಒಟ್ಟಿಗೆ ವಾಸ ಮಾಡುವ, ಒಂದೇ ವಿಳಾಸದಲ್ಲಿ ವಾಸವಿರದ ಕುಟುಂಬಗಳು ಮತ್ತು ಸಹ ಕೆಲಸಗಾರರು ಹಾಗೂ ಸ್ನೇಹಿತರನ್ನು ಒಳಗೊಂಡ ಕುಟುಂಬೇತರ ವ್ಯಕ್ತಿಗಳಿದ್ದಾರೆ.

    ಅಧ್ಯಯನದಿಂದ ಬಹಿರಂಗವಾಗಿದ್ದೇನೆಂದರೆ ಬಹುತೇಕ ಕುಟುಂಬದವರೇ ಕರೊನಾ ರೋಗಿಯ ಸೋಂಕಿನ ಪ್ರಾಥಮಿಕ ಸಂಪರ್ಕವೆಂದು ತಿಳಿದುಬಂದಿದೆ. ಹೆಚ್ಚು ವೈರಸ್​ ಸ್ಪೋಟಗೊಂಡಷ್ಟು ಹೆಚ್ಚು ಸೋಂಕಿತರಾಗುತ್ತಾರೆ. ಅದರ ಪ್ರಭಾವವು ಸಹ ಬಹಳಷ್ಟಿರುತ್ತದೆ. ಹೀಗಾಗಿ ದೊಡ್ಡ ಕುಟುಂಬಗಳಾಗಿದ್ದರೆ ಉಸಿರಾಟದ ದ್ರವವು ಗಾಳಿಯಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಇತರರಿಗೆ ಬೇಗ ಸೋಂಕು ತಗಲುತ್ತದೆ ಎಂದು ಹೈದರಾಬಾದ್​ನ ಇಂಡಿಯನ್​ ಇನ್ಸ್ಟಿಟ್ಯೂಟ್​ ಆಫ್​ ಪಬ್ಲಿಕ್​ ಹೆಲ್ತ್​ನ ಪ್ರಾಧ್ಯಾಪಕರಾದ ಡಾ. ವಿ ರಮಣ ಧಾರ ತಿಳಿಸಿದ್ದಾರೆ. ಇದನ್ನೂ ಓದಿ: ಹಳೆಯ ಕಾಲದ ಚೊಂಬೆಂದು ನಂಬಿಸಿ ಟ್ರಾವೆಲ್ಸ್ ಉದ್ಯಮಿಗೆ 2 ಕೋಟಿ ರೂ. ಚೊಂಬು!

    ಹೀಗಾಗಿ ಮನೆಯಲ್ಲಿ ಇರುವಾಗಲೂ ಮಾಸ್ಕ್​ ಉಪಯೋಗಿಸುವ ಅತ್ಯಂತ ಸುರಕ್ಷಿತ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ತೆಲುಗು-ತಮಿಳಿನಲ್ಲಿ ಸುದೀಪ್​ಗೆ ಡಿಮ್ಯಾಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts