ತುಮಕೂರು: 13 ವರ್ಷದ ಅಪ್ರಾಪ್ತೆ ಮಗಳ ಮೇಲೆಯೇ ಹೆತ್ತ ತಂದೆ ಅತ್ಯಾಚಾರವೆಸಗಿರುವ ಘಟನೆ ತಿಪಟೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ತಂದೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ಗೆ ದಿನಕ್ಕೊಂದು ತಿರುವು..!: ಪ್ರೀತಂಗೌಡ ಆಪ್ತರು ಎಸ್ಐಟಿ ವಶಕ್ಕೆ!
ತಂದೆಯಿಂದಲೇ ಮಗಳಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ ಆ ಬಾಲಕಿಯ ತಾಯಿಯೇ ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ತಿಪಟೂರು ನಗರದ ಗಾಂಧಿನಗರದ ಹಿಪ್ಪೇತೋಪು ಎಂಬಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ತಂದೆಯ ವಿರುದ್ಧ ಪೋಸ್ಕೋ ಪ್ರಕರಣ ದಾಖಲಾಗಿದೆ.
ತಂದೆ ಮಗಳ ಮೇಲೆ ಈ ಹಿಂದೆಯೂ ಅತ್ಯಾಚಾರಕ್ಕೆ ಯತ್ನಿಸಿದ್ದನು. ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮೇ 6ರಂದೇ ದೂರು ದಾಖಲಾಗಿತ್ತು. ಆದರೆ, ಈ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಕೂಲಿ ಹೋದ ಸಂದರ್ಭದಲ್ಲಿ ಮನೆಯಲ್ಲೇ ಉಳಿಯುತ್ತಿದ್ದ ಪತಿಯು ತನ್ನ ಸ್ವಂತ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.