

ನವದೆಹಲಿ: ತನ್ನ ಒಪ್ಪಿಗೆಯಿಲ್ಲದೆ ತನಗೆ ಜನ್ಮ ನೀಡಿದರು ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಪೋಷಕರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಯುನೈಟೆಡ್ ಸ್ಟೇಟ್ಸ್ನ ನ್ಯೂಜೆರ್ಸಿಯಲ್ಲಿ ನಡೆದಿದೆ.
ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯ ನಡೆಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಈ ವಿಚಾರವಾಗಿ ಆಕೆಯ ಕುರಿತು ಅಪಹಾಸ್ಯ ಮಾಡುತ್ತಿದ್ದು, ಈ ವಿಚಾರ ಸಖತ್ ಸದ್ದು ಮಾಡುತ್ತಿದೆ.
ಕಾಸ್ ತಿಯಾಜ್ ಹೆಸರಿನ ಮಹಿಳೆ ತನ್ನ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಸುದ್ದಿಯಾಗಿದ್ದು, ನಾನು ನಿಜವಾಗಿಯೂ ಇಲ್ಲಿರಲು ಬಯಸಿದ್ದೇನೆಯೇ ಎಂದು ನೋಡಲು ನಾನು ಹುಟ್ಟುವ ಮುನ್ನ ಅವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ನನಗೆ ಇಲ್ಲಿರಲು ಇಷ್ಟವಿಲ್ಲ ಹೀಗಾಗಿ ನಾನು ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಮಹಿಳೆ ಹೇಳಿದ್ದಾರೆ.
ಇತ್ತ ಮಹಿಳೆಯ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನೀವು ನಿಜವಾಗಲೂ ಕೇಸ್ ಹಾಕಿದ್ದೀರಾ ಅಥವಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಾ ಅಥವಾ ಹಣಕ್ಕಾಗಿ ಈ ಮಾರ್ಗ ಅನುಸರಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಈಕೆಯನ್ನು ಮೊದಲು ಹುಚ್ಚಾಸ್ಪತ್ರೆಗೆ ದಾಖಲಿಸಿ ಎಂದು ಕಮೆಂಟ್ ಹಾಕಿದ್ದಾರೆ.