More

    ಕೀಳರಿಮೆ ಬಿಟ್ಟು ಕೌಶಲಕ್ಕೆ ಆದ್ಯತೆ ನೀಡಿ

    ಸೊರಬ: ಪ್ರೌಢ ಶಿಕ್ಷಣ ಮುಗಿದ ನಂತರ ಯಾವುದೇ ವಿಷಯದ ಅಧ್ಯಯನ ಕನಿಷ್ಠವಲ್ಲ. ತೆಗೆದುಕೊಂಡಿರುವ ವಿಷಯದ ಅಧ್ಯಯನದಲ್ಲಿ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಒಳ್ಳೆಯ ಅಂಕ ಗಳಿಸಿದರೆ ಮಾತ್ರ ಮುಂದಿನ ದಾರಿ ಸುಗಮವಾಗುತ್ತದೆ ಎಂದು ಆನವಟ್ಟಿ ಪದವಿ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ತಿಳಿಸಿದರು.
    ಶನಿವಾರ ಆನವಟ್ಟಿ ಗುರುಭವನದಲ್ಲಿ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
    ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಮ್ಮಲ್ಲಿರುವ ಸುಪ್ತ ಕೌಶಲಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಎಂದೂ ಕೀಳರಿಮೆ ಇರಬಾರದು. ವಿದ್ಯೆ ಜತೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿತು ಹಿರಿಯರನ್ನು ಗೌರವಿಸುವುದು ಸಮಾಜದ ಆಸ್ತಿಯಾಗಬೇಕು ಎಂದರು.
    ಸಂಘದ ಅಧ್ಯಕ್ಷ ಮಾರುತಿ ಕುಮಾರ್ ಮಾತನಾಡಿ, ಮೊಬೈಲ್ ದಾಸರಾಗುವ ಬದಲು ಪುಸ್ತಕ ಪ್ರೇಮಿಗಳಾಗಬೇಕು. ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಒಳ್ಳೆಯ ಅಂಕ ಗಳಿಸಬೇಕು ಎಂದು ಸಲಹೆ ನೀಡಿದರು.
    ಎಸ್ಸಿ, ಎಸ್ಟಿ ಸಮುದಾಯಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತರಾದ ನೌಕರರನ್ನು ಸರ್ಕಾರಿ ನೌಕರ ಸಂಘದಿಂದ ಸನ್ಮಾನಿಸಲಾಯಿತು. ಎಸ್ಸ-, ಎ್ಟ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾರುತಿ ಕುಮಾರ್, ಎಚ್.ಎಚ್.ಬಸವರಾಜಪ್ಪ, ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್, ಚನ್ನನಾಯ್ಕ, ಎನ್.ಗಣಪತಿ, ಡಾ. ಮೂಕಪ್ಪ ನಾಯ್ಕ, ವೆಂಕಟೇಶ್ ನಾಯ್ಕ, ಬಿ.ಮಂಜಪ್ಪ, ಅನುರಾಧಾ, ಕೃಷ್ಣಪ್ಪ, ಚಾಂದ್ಯನಾಯ್ಕ, ಶಂಕರಪ್ಪ, ಎಂಬಿಬಿಎಸ್ ವಿದ್ಯಾರ್ಥಿನಿ ಎ.ಎಂ ಕಾವ್ಯಾ, ರವಿಕುಮಾರ್, ಯಶವಂತಪ್ಪ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts