

ತಿ.ನರಸೀಪುರ: ತಾಲೂಕಿನ ಹ್ಯಾಕನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎಸ್.ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಯಮ್ಮ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕ್ರಮವಾಗಿ ಎಚ್.ಎಸ್.ಕುಮಾರ್ ಹಾಗು ಜಯಮ್ಮ ಅವರಿಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಹಸೀನಾ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನಿರ್ದೇಶಕರಾದ ಮಲ್ಲೇಶ್, ಶಿವಮಲ್ಲಪ್ಪ, ಮಲ್ಲಿಕಾರ್ಜುನಸ್ವಾಮಿ, ಬಸವರಾಜು, ಬಸವಯ್ಯ, ಗೌರಮ್ಮಣಿ, ಪುಟ್ಟಮ್ಮ ಹಾಗೂ ಶೇಖರಪ್ಪ ಚುನಾವಣೆಯಲ್ಲಿ ಹಾಜರಿದ್ದು, ಸಹಕಾರ ಸಂಘದ ವರಿಷ್ಠರ ಆಯ್ಕೆಗೆ ಅನುಮೋದನೆ ನೀಡಿದರು. ಗೌಡ್ರು ಮಹಾದೇವಪ್ಪ, ರವಿ, ಪುಟ್ಟಬುದ್ದಿ, ಬಸವಣ್ಣ, ಮೂಗೂರು ಮಹೇಶ್, ರಾಜ ಬುದ್ದಿ, ಮಹೇಶ್ ಕುಮಾರ್, ಜಿ.ಎಚ್.ಪುಟ್ಟಮಾದಯ್ಯ, ಕೆಂಪರಾಜು, ಪ್ರಕಾಶ್, ನಾಗೇಂದ್ರ ಪ್ರಸಾದ್, ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಆಟೋ ಮಹೇಶ್, ಮಹದೇವಯ್ಯ, ಗುರುಮೂರ್ತಿ, ರೂಪೇಶ್, ಶಂಕರಪ್ಪ, ಪುಟ್ಟಸ್ವಾಮಿ, ಎಚ್.ಎಂ.ಸ್ವಾಮಿ, ಪ್ರಭುಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಗೂ ಯಜಮಾನರು ಇದ್ದರು.