ಜ್ಞಾನಸುಧಾ 29 ವಿದ್ಯಾರ್ಥಿಗಳಿಗೆ ಟಾಪ್ 10ರೊಳಗೆ ರ‌್ಯಾಂಕ್

jnanasudha
ಜ್ಞಾನಸುಧಾ
Published on

ಕಾರ್ಕಳ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ‌್ಯಾಂಕ್ ಪಡೆದಿದ್ದಾರೆ.

ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್.596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀರಕ್ಷಾ ಆರ್.ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ.ಕುಮಾರ್ 595 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ.

ಮಯೂರ್ ಗೌಡ, ಭಾರ್ಗವ್ ಎಚ್.ನಾಯಕ್, ವಿಷ್ಣು ಜಿ.ನಾಯಕ್ ಹಾಗೂ ಶ್ರಾವ್ಯಾ ವಾಗ್ಲೆ 594 ಅಂಕ, ಹರ್ಷಿತ್ ಆರ್. ಎಚ್., ಅನ್ವಿತಾ ನಾಯಕ್, ವಿಶ್ವ ಆರ್.ನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹಾ ಎ.ಕಾಮತ್ 593 ಅಂಕ, ಕಾರ್ಕಳ ಜ್ಞಾನಸುಧಾದ ಉತ್ಸವ್ ಸಿ.ಪಾಟೀಲ್, ಸಂಜನಾ ಶೆಣೈ ಮತ್ತು ಉಡುಪಿ ಜ್ಞಾನಸುಧಾದ ರಚಿತ್ ಜೆ.ಬಿ. ಹಾಗೂ ಸೃಷ್ಟಿ 592 ಅಂಕ, ಕಾರ್ಕಳ ಜ್ಞಾನಸುಧಾದ ಸರ್ವಜಿತ್ ಕೆ.ಆರ್., ಧನ್ಯಶ್ರೀ ಆರ್.591 ಅಂಕವನ್ನು, ಅನುಷ್ಕಾ ಜಿ., ಪ್ರಣವ್ ಎನ್.ಎಂ., ಶ್ರೇಯಸ್ ಕೆ., ಅನ್ವಿತಾ ಆರ್.ಕಾಮತ್, ಸುಕೃತಿ ಜಿ.ಜೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ. 590 ಅಂಕಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಹನಾ ನಾಯಕ್ ಹಾಗೂ ತನ್ವಿರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‌್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 591ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5ನೇ ಸ್ಥಾನಿಯಾಗಿ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ.ಯಶಸ್ವಿ ನಾಯ್ಕ (589 ಅಂಕ) ಸಚಿನ್ ಸುರೇಶ್ ಶೆಣೈ(589 ಅಂಕ) ಹಾಗೂ ಖತಿಜಾತುಲ್ ರಫಿಯಾ (588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಅಧಿಕ ಪರ್ಸಂಟೇಜ್ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 521 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 486 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 49ರಲ್ಲಿ 45 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 213 ವಿದ್ಯಾರ್ಥಿಗಳಲ್ಲಿ 191 ವಿಶಿಷ್ಟ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ 29 ವಿದ್ಯಾರ್ಥಿಗಳು ಮೊದಲ ಹತ್ತು ರ‌್ಯಾಂಕ್ ಪಡೆದಿದ್ದು, 724 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಾಖಲೆಯ ಫಲಿತಾಂಶ ಪಡೆದಿದ್ದಾರೆ.

ಗಣಿತಶಾಸ್ತ್ರ-144, ಜೀವಶಾಸ್ತ್ರದಲ್ಲಿ 113, ರಸಾಯನಶಾಸ್ತ್ರ-48, ಭೌತಶಾಸ್ತ್ರ-27, ಸಂಖ್ಯಾಶಾಸ್ತ್ರ-20, ಗಣಕಶಾಸ್ತ್ರ-37, ಮೂಲಗಣಿತ-2, ಲೆಕ್ಕಶಾಸ್ತ್ರ-7, ವ್ಯವಹಾರ ಅಧ್ಯಯನದಲ್ಲಿ 21, ಸಂಸ್ಕೃತ-113 ಮತ್ತು ಕನ್ನಡ-4 ಸೇರಿದಂತೆ 536 ವಿದ್ಯಾರ್ಥಿಗಳು ವಿಷಯವಾರು ಪೂರ್ಣಾಂಕ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net