

ಸುಬ್ರಹ್ಮಣ್ಯ: ಗುರುಪೂರ್ಣಿಮೆ ಅಂದರೆ ಕೇವಲ ಆಚರಣೆ ಅಲ್ಲ. ನಮ್ಮೊಳಗಿನ ಅಜ್ಞಾನ ತಮಸ್ಸನ್ನು ದೂರ ಮಾಡುವ ಜ್ಞಾನ ದೀಪವನ್ನು ಹೊತ್ತವರಿಗೊಂದು ಆಧ್ಯಾತ್ಮಿಕ ವಂದನೆ. ಗುರುವಿನ ಪಾತ್ರ ಬದುಕಿನಲ್ಲಿ ಪಥದರ್ಶಕದಂತೆ ಇರುತ್ತದೆ. ಯುವ ಪೀಳಿಗೆ ಗುರು ಪರಂಪರೆ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ಸುಬ್ರಹ್ಮಣ್ಯ ಬಿಜೆಪಿ ಶಕ್ತಿಕೇಂದ್ರ ಮತ್ತು ಪರಿವಾರ ಸಂಘಟನೆಗಳಿಂದ ಮಠದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಗ್ರಾಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸದಸ್ಯ ವೆಂಕಟೇಶ್ ಎಚ್.ಎಲ್., ಪ್ರಮುಖರಾದ ದಿನೇಶ್ ಸಂಪ್ಯಾಡಿ, ಲೋಕೇಶ್ ಬಿ.ಎನ್., ಯಶೋದಾಕೃಷ್ಣ ನೂಚಿಲ, ಶ್ರೀಕುಮಾರ್ ಬಿಲದ್ವಾರ ಮತ್ತಿತರರು ಉಪಸ್ಥಿತರಿದ್ದರು.