ರಾಮ ಭಟ್ ಕುಕ್ಕುಜೆಗೆ ಗೌರವಾರ್ಪಣೆ

New Project (9)
Published on

ಕಡಬ: ಬಿಜೆಪಿ ಸುಳ್ಯ ಮಂಡಲದ ಬೂತ್ ಸಮಿತಿ-66 ಮೊಗರು, ಸವಣೂರು ವತಿಯಿಂದ ಗುರುಪೂರ್ಣಿಮಾ ಉತ್ಸವ ಅಂಗವಾಗಿ ನಿವೃತ್ತ ಶಿಕ್ಷಕ ರಾಮ ಭಟ್ ಕುಕ್ಕುಜೆ ಅವರಿಗೆ ಗುರುವಂದನೆ ನಡೆಯಿತು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಮೆದು, ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಬಿಜೆಪಿ ಸುಳ್ಯ ಮಂಡಲ ಸಮಿತಿ ಸದಸ್ಯ ತಾರಾನಾಥ ಕಾಯರ್ಗ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಶ್ರೀಕೃಷ್ಣ ಭಟ್ ಕುಕ್ಕುಜೆ, ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಶ್ರೀಧರ ಇಡ್ಯಾಡಿ, ಬೂತ್ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಕುಕ್ಕುಜೆ, ಮೊಗರು ಬೂತ್‌ನ ಬಿ.ಎಲ್. 2 ಪ್ರಮುಖ್ ಮಹಾಬಲ ಪೆರಿಯಡ್ಕ, ಕಾರ್ಯಕರ್ತರಾದ ಭವಿತ್ ಇಡ್ಯಾಡಿ, ದಯಾನಂದ ಮೆದು ಉಪಸ್ಥಿತರಿದ್ದರು. ಬೂತ್ ಸಮಿತಿ ಅಧ್ಯಕ್ಷ ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net