

ತಾವರಗೇರಾ: ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರು 265 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸೋಮವಾರ ಗುರುಸ್ವಾಮಿಗಳಾದ ಪ್ರಶಾಂತ, ಯಂಕನಗೌಡ, ಮೌನೇಶ, ಅಶೋಕ, ಸಿದ್ದಣ್ಣ , ಚಿದಾನಂದ, ವೆಂಕಟಸಿಂಗ, ಅಮರೇಶ ಇರಮುಡಿ ಕಟ್ಟಿದರು.
ಅದರಲ್ಲಿ 12 ರಿಂದ 15 ಜನ ಮಕ್ಕಳು ಮಣಿಕಂಠಗಳಾಗಿದ್ದರು. ಬೆಳಗ್ಗೆ 7ರಿಂದ ಸಾಯಂಕಾಲ 5ಗಂಟೆವರಿಗೆ ಕಾರ್ಯಕ್ರಮ ನಡೆಯಿತು. ಮಾಲಾಧಾರಿಗಳು ಗುಂಪುಗಳಾಗಿ ವಿಂಗಡನೆಗೊಂಡು ವಾಹನಗಳಲ್ಲಿ ಏಕ ಕಾಲದಲ್ಲಿ ಶಬರಿಮಲೆ ಕಡೆ ಪಯಣ ಬೆಳಸಿದರು. ಕುಟುಂಬಸ್ಥರು ಮತ್ತು ಸ್ನೇಹಿತರು ಬೀಳ್ಕೋಟ್ಟರು.