ಉಪ್ಪಿನಂಗಡಿಗೆ ಗುರುಪಾದುಕಾ ಯಾತ್ರೆ

6
Published on

ಉಪ್ಪಿನಂಗಡಿ: ಕಾಶಿ ಮಠಾಧೀಶರಾಗಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುಪಾದುಕಾ ಯಾತ್ರೆ ಪುತ್ತೂರಿನಿಂದ ಉಪ್ಪಿನಂಗಡಿಗೆ ಗುರುವಾರ ಆಗಮಿಸಿದ್ದು, ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯ ವತಿಯಿಂದ ರಥಬೀದಿ ಪ್ರವೇಶ ದ್ವಾರದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ದೇವಳ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ದೇವಿದಾಸ ಭಟ್, ಕೆ.ಅನಂತರಾಯ ಕಿಣಿ, ಡಾ.ಎಂ.ಆರ್.ಶೆಣೈ, ಉಪೇಂದ್ರ ಪೈ, ಕರಾಯ ಗಣೇಶ ನಾಯಕ್, ಪಿ.ಹರೀಶ ಪೈ, ನರಸಿಂಹ ಪಡಿಯಾರ್, ವೈ.ವೆಂಕಟೇಶ ಶೆಣೈ, ಕೆ.ಶ್ರೀನಿವಾಸ ಪಡಿಯಾರ್, ನಾಗೇಶ ಪ್ರಭು, ವಾಸುದೇವ ಪ್ರಭು ಎಚ್., ಕೆ.ನರಸಿಂಹ ನಾಯಕ್, ಶ್ರೀನಿವಾಸ ಭಟ್, ಯು.ರಾಜೇಶ್ ಪೈ, ಉಮೇಶ್ ಶೆಣೈ, ಅಚ್ಚುತ ಪಡಿಯಾರ್, ಕೆ.ಗಿರಿಧರ್ ನಾಯಕ್, ಕರಾಯ ಗಿರೀಶ ನಾಯಕ್, ಪೂಜಾ ಪ್ರಭು, ವೆಂಕಟೇಶ್ ಕಿಣಿ, ಗಿರಿಧರ್ ನಾಯಕ್, ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು, ಕೆ.ಮಂಜುನಾಥ ನಾಯಕ್, ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾದ ಅಶೋಕ್ ಪ್ರಭು, ಚಂದ್ರಕಾಂತ್ ಭಟ್, ರವಿಶಂಕರ್ ಪೈ, ಕೇದಾರ್ ಕುಡ್ವ, ಮಂಗಳೂರಿನ ಗುರುದತ್ ಕಾಮತ್ ಉಪಸ್ಥಿತರಿದ್ದರು.

ಪಾದುಕೆಗೆ ಪೂಜಾ ವಿಧಿವಿಧಾನಗಳನ್ನು ದೇವಾಲಯ ಅರ್ಚಕರಾದ ರವೀಂದ್ರ ಭಟ್, ಸಂದೀಪ್ ಭಟ್, ಕೆ.ಸುಬ್ರಹ್ಮಣ್ಯ ಭಟ್ ನಡೆಸಿಕೊಟ್ಟರು. ಶ್ರೀನಿವಾಸ ಭಟ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net