ಸುಬ್ರಹ್ಮಣ್ಯದಲ್ಲಿ 30 ಗುರುಗಳಿಗೆ ಗುರುನಮನ

New Project (17)
Published on

ಸುಬ್ರಹ್ಮಣ್ಯ: ಗುರುಪೂರ್ಣಿಮೆ ಅಂಗವಾಗಿ ಸುಬ್ರಹ್ಮಣ್ಯ ಬಿಜೆಪಿ ಶಕ್ತಿ ಕೇಂದ್ರ ಮತ್ತು ಪರಿವಾರ ಸಂಘಟನೆಗಳಿಂದ ಸುಬ್ರಹ್ಮಣ್ಯದ 30 ಗುರುಗಳಿಗೆ ಗುರುವಾರ ಗುರುವಂದನೆ ಸಲ್ಲಿಸಲಾಯಿತು.

ನಿವೃತ್ತ ಪ್ರಾಚಾರ್ಯರಿಗೆ, ನಿವೃತ್ತ ಮುಖ್ಯಗುರುಗಳಿಗೆ, ನಿವೃತ್ತ ಉಪನ್ಯಾಸಕರಿಗೆ, ನಿವೃತ್ತ ಶಿಕ್ಷಕರಿಗೆ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಕನ್ನಡ ಪಂಡಿತ ವಿದ್ವಾನ್ ಕೇಶವ ಭಟ್, ಪುಂಗವ ಗೌಡ, ಡಾ.ಕೆ.ಎಸ್.ಎನ್.ಉಡುಪ, ಅಶೋಕ್ ಕುಮಾರ್ ಮೂಲೆಮಜಲು, ಡಾ.ಶಿವಕುಮಾರ್ ಹೊಸೋಳಿಕೆ, ಪ್ರೊ.ಕೆ.ಆರ್.ಶೆಟ್ಟಿಗಾರ್, ವಸಂತ ಶೆಟ್ಟಿ, ದಿನೇಶ್, ಯಶೋದಾ ದಿನೇಶ್, ಪ್ರೊ.ಬಾಲಕೃಷ್ಣ ಪೈ, ಪ್ರೊ.ಉದಯಕುಮಾರ್, ಶ್ರೀಕೃಷ್ಣ ಶರ್ಮ, ಕೆ.ರಾಮಶರ್ಮ, ಎಸ್.ಎನ್.ಭಟ್, ದೊಡ್ಡಣ್ಣ ಗೌಡ, ಮುತ್ತಯ್ಯ ಗೌಡ, ಸುಬ್ರಹ್ಮಣ್ಯ ಅತ್ಯಾಡಿ, ನೀಲಪ್ಪ ಗೌಡ, ಶಾಂತಿ ನೀಲಪ್ಪ ಗೌಡ, ಡಾ.ತಿಲಕ್ ಎ.ಎ., ಗಾಯತ್ರಿ ತಿಲಕ್, ವಿಶ್ವನಾಥ ನಡುತೋಟ, ಸುಶೀಲಾ ಪಿ.ಜಿ., ಯಶೋದಾ, ನಾರಾಯಣ ಪಿ., ಜಯಂತಿ ದೊರೈಮಣಿ, ಶಿವರಾಮ ಭಟ್ ಅವರ ಮನೆಗೆ ತೆರಳಿ ಗುರುವಂದನೆ ಸಲ್ಲಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸದಸ್ಯರಾದ ವೆಂಕಟೇಶ್ ಎಚ್.ಎಲ್., ಗಿರೀಶ್ ಆಚಾರ್ಯ ಪೈಲಾಜೆ, ಭಾರತಿ ದಿನೇಶ್, ಪ್ರಮುಖರಾದ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಚ್ಚುತ್ತ ಗೌಡ, ಲೋಕೇಶ್ ಬಿ.ಎನ್., ಯಶೋದಾಕೃಷ್ಣ ನೂಚಿಲ, ಶ್ರೀಕುಮಾರ್ ಬಿಲದ್ವಾರ, ಶೇಖರ್ ಕುಕ್ಕೆ, ಶೋಭಾ ಗಿರಿಧರ್, ರಾಮಚಂದ್ರ ಡಿ. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net