

ಬಾಗಲಕೋಟೆ: ಗುರುಬಸವ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ೧.೮೨ ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ. ಜನರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ಭಾನುವಾರ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ೩೪೫ ಕೋಟಿ ರೂ.ಗಳ ದುಡಿಯುವ ಬಂಡವಾಳವನ್ನು ಬ್ಯಾಂಕ್ ಹೊಂದಿದೆ. ೩೧೫ ಕೋಟಿ ರೂ.ಗಳ ಠೇವಣಿ ಹೊಂದಿದ್ದು, ೧೧೮ ಕೋಟಿ ರೂ.ಗಳ ಸಾಲ ವಿತರಣೆ ಆಗಿದೆ ಎಂದರು.
೨೦೦೨ರಲ್ಲಿ ಬ್ಯಾಂಕ್ ಆರಂಭಗೊಂಡಾಗ ೧೯೯೩ ಸದಸ್ಯರನ್ನು ಹೊಂದಿತ್ತು. ೨೦೨೩ರ ಮಾರ್ಚ್ ಅಂತ್ಯಕ್ಕೆ ೭೧೦೦ ಸದಸ್ಯರಾಗಿದ್ದರೆ. ೨೦೦೨ರಲ್ಲಿ ೪೪.೬೮ ಲಕ್ಷ ರೂ.ಗಳ ಶೇರು ಬಂಡವಾಳವನ್ನು ಹೊಂದಿತ್ತು. ೨೦೨೩ರ ಮಾರ್ಚ್ ಅಂತ್ಯಕ್ಕೆ ೩.೭೭ ಕೋಟಿ ರೂ.ಗಳ ಶೇರು ಬಂಡವಾಳ ಹೊಂದಿದೆ. ೧.೬೫ ಲಕ್ಷ ರೂ.ಗಳ ನಿಽಯೊಂದಿಗೆ ಶುರುವಾದ ಬ್ಯಾಂಕ್ ಈಗ ೨೭.೧೦ ಕೋಟಿ ರೂ.ಗಳ ನಿಽಗಳನ್ನು ಹೊಂದಿದೆ ಎಂದು ವಿವರಿಸಿದರು.
ಬ್ಯಾಂಕ್ ಆರಂಭದಲ್ಲಿ ೩.೬೩ ಕೋಟಿ ರೂ.ಗಳ ಸಾಲ ವಿತರಿಸಿತ್ತು, ಈಗ ೧೧೮ ಕೋಟಿ ರೂ.ಗಳ ಸಾಲ ವಿತರಿಸಿದೆ. ಆರಂಭದಲ್ಲಿ ೧೩.೪೪ ಲಕ್ಷ ರೂ.ಗಳ ಲಾಭ ಹೊಂದಿದ್ದ ಬ್ಯಾಂಕ್ ಪ್ರಸ್ತುತ ೧.೮೨ ಕೋಟಿ ರೂ.ಗಳ ಲಾಭಗಳಿಸಿದೆ. ಈ ಬಾರಿಯೂ ಶೇ.೧೫ ಡಿವಿಡೆಂಡ್ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದಿಂದ ಉದ್ಯಮಿದಾರರಿಗೆ, ವ್ಯಾಪಾರಸ್ಥರಿಗೆ, ನೌಕರಸ್ಥರಿಗೆ, ಕೂಲಿಕಾರ್ಮಿಕರಿಗೆ ಅಲ್ಲದೆ ಇನ್ನುಳಿದ ಸದಸ್ಯರಿಗೆಬ ಅವರ ಅವಶ್ಯಕತೆಗಳ ಅನುಸಾರವಾಗಿ ಸಾಲಗಳನ್ನು ವಿತರಿಸಲಾಗುತ್ತಿದೆ. ಜಾಮೀನು ಸಾಲ, ಸಂಬಳ ಭದ್ರತೆ ಸಾಲ, ಆಸ್ತಿ ಭದ್ರತೆ ಸಾಲ, ಗೃಹನಿರ್ಮಾಣ, ವಾಹನ, ರೋಖು ಪತ್ತಿನ ಸಾಲ, ಚಿನ್ನ ಭದ್ರತೆ ಸಾಲಗಳನ್ನು ಬ್ಯಾಂಕಿನಲ್ಲಿ ವಿತರಿಸಲಾಗುತ್ತಿದೆ. ಬಿಇ ಕಾಲೇಜು ಶಾಖೆ, ಎಪಿಎಂಸಿ ಶಾಖೆ, ಅಡರ ಬಜಾರ ಶಾಖೆ, ಮುಧೋಳ ಶಾಖೆ, ಅಮೀನಗಡ ಶಾಖೆ ಹಾಗೂ ಕಮತಗಿ ಸೇರಿ ಒಟ್ಟು ೬ ಶಾಖೆಗಳು ಹಾಗೂ ನವನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಪ್ರಗತಿ ಸಾಽಸುತ್ತ ಬಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬ್ಯಾಂಕಿನ ಉಪಾಧ್ಯಕ್ಷ ಮುರಿಗೆಪ್ಪಾ ನಾರಾ, ನಿರ್ದೇಶಕರಾದ ಗುರುಬಸವ ಸೂಳಿಭಾವಿ, ಈರಣ್ಣ ಅಥಣಿ, ಸುಭಾಸ ಜಿಗಜಿನ್ನಿ, ಈರಣ್ಣ ಹಲಕುರ್ಕಿ, ಅಶೋಕ ಸಜ್ಜನ(ಬೇವೂರ), ಪ್ರಬಯ್ಯ ಸರಗಣಾಚಾರಿ, ಪ್ರಕಾಶ ರೇವಡಿಗಾರ, ಮಲ್ಲಿಕಾರ್ಜುನ ಸಾಸನೂರ, ರುದ್ರಪ್ಪ ಅಕ್ಕಿಮರಡಿ, ಮಹೇಶ ಅಂಗಡಿ, ಕುಮಾರ ಯಳ್ಳಿಗುತ್ತಿ, ದಾಮೋದರ ರಾಠಿ, ಜಯಪ್ರಕಾಶ ಬೆಂಡಿಗೇರಿ, ರಾಜು ನಾಯ್ಕರ, ರೇಖಾ ಮೊರಬದ, ಭ್ಯಾಗ್ಯಶ್ರೀ ಹಂಡಿ, ಬ್ಯಾಂಕ್ ಮುಖ್ಯವ್ಯಸ್ಥಾಪಕ ಎಂ.ಎಚ್.ಹಿರೇಮಠ ಉಪಸ್ಥಿತರಿದ್ದರು.