ಪುಣ್ಚಪ್ಪಾಡಿ ಶಕ್ತಿಕೇಂದ್ರದಿಂದ ಗುರುವಂದನೆ

New Project (13)
Published on

ಕಡಬ: ಭಾರತೀಯ ಜನತಾ ಪಾರ್ಟಿ ಪುಣ್ಚಪ್ಪಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 68 ಪುಣ್ಚಪ್ಪಾಡಿ ಮತ್ತು ಬೂತ್ ಸಂಖ್ಯೆ 69 ಕುಮಾರಮಂಗಲ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ನಿವೃತ್ತ ಮುಖ್ಯಗುರುಗಳಾದ ಚಂದ್ರಕಲಾ ಸೋಂಪಾಡಿ ಮತ್ತು ಮೋನಪ್ಪ ನಾಯ್ಕ ಕೊಂಬಕೆರೆ ಅವರಿಗೆ ಗುರುವಂದನೆ, ಗೌರವಾರ್ಪಣೆ ಕಾರ್ಯಕ್ರಮ ಅವರ ನಿವಾಸದಲ್ಲಿ ನಡೆಯಿತು.

ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ ಸುಲಾಯ, ಪುಣ್ಚಪ್ಪಾಡಿ ಶಕ್ತಿಕೇಂದ್ರ ಪ್ರಮುಖ್ ಮಹೇಶ್ ಕೆ.ಸವಣೂರು, ಸುಳ್ಯ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ಆಶಾ ರೈ ಕಲಾಯಿ, ಬೂತ್ ಸಂಖ್ಯೆ 68ರ ಅಧ್ಯಕ್ಷ ಧನರಾಜ್ ಓಡಂತರ್ಯ, ಬೂತ್ 69ರ ಕಾರ್ಯದರ್ಶಿ ಮೋಹಿತ್ ಕುಮಾರಮಂಗಲ, ಪ್ರಮುಖರಾದ ಸುರೇಶ್ ರೈ ಸೂಡಿಮುಳ್ಳು, ದಿವಾಕರ ಗುಂಡ್ಯಡ್ಕ, ತೀರ್ಥನ್ ಬೊಳ್ಳಾಜೆ, ಸಂಪತ್ ಕುಮಾರ್ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net