

ಬಂಟ್ವಾಳ: ಮೂವತ್ತಾರು ವರ್ಷಗಳ ಸುಭದ್ರ ಇತಿಹಾಸ ಹೊಂದಿರುವ ಯುವವಾಹಿನಿ ಸಂಸ್ಥೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಮತ್ತು ಸಂದೇಶ ದಾರಿದೀಪವಾಗಿದೆ, ಗುರುತತ್ವವಾಹಿನಿ ಮೂಲಕ ನಿರಂತರ ನಡೆಯುವ ಭಜನಾ ಸಂಕೀರ್ತನೆ ಯುವವಾಹಿನಿಯ ಯಶಸ್ಸಿನ ಮೆಟ್ಟಿಲಾಗಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಹೇಳಿದರು.
ಪಲ್ಲಮಜಲು ರಾಜೇಂದ್ರರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 15ರ ಗುರು ಸಂದೇಶದಲ್ಲಿ ಮಾತನಾಡಿದರು. ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲ, ಯಶೋಧರ ಕಡಂಬಲ್ಕೆ, ನಯನಾ ಪಚ್ಚಿನಡ್ಕ, ಮಲ್ಲಿಕಾ ಪಚ್ಚಿನಡ್ಕ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.