13ರಂದು ಪೊಳಲಿಯಲ್ಲಿ ಶ್ರೀ ಹರಿಲೀಲಾ ಯಕ್ಷ ನಾದೋತ್ಸವ

Published on

ಗುರುಪುರ: ಶ್ರೀ ಹರಿಲೀಲಾ ಯಕ್ಷನಾದ 4ನೇ ವರ್ಷದ ಪ್ರಶಸ್ತಿ ಪ್ರದಾನ, ಯಕ್ಷ ನಾದೋತ್ಸವ ಅ.13ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಪರಾಹ್ನ 2.15ಕ್ಕೆ ನಡೆಯಲಿದೆ.

ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನದ ಹಿರಿಯ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುಲಾಗುವುದು. ಮಂಗಳೂರು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಪುರುಷೋತ್ತಮ ಭಟ್ ನಡುವಜೆ ಅಭಿನಂದನಾ ವಾತುಗಳನ್ನಾಡಲಿದ್ದಾರೆ. ಶ್ರೀ ಕ್ಷೇತ್ರ ಪೊಳಲಿಯ ಆಡಳಿತಾಧಿಕಾರಿ ಪ್ರವೀಣ್, ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಎ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಅತಿಥಿಗಳಾಗಿರುವರು.

ಅಪರಾಹ್ನ 2.30ಕ್ಕೆ ‘ಹರಿಲೀಲಾ’ ಶಿಷ್ಯ ವೃಂದದಿಂದ ಯಕ್ಷಗಾನನಾದ ವೈಖರಿ, ಸಂಜೆ 4.40ಕ್ಕೆ ‘ಅಬ್ಬರ ತಾಳ’ ಚೆಂಡೆ ಜುಗಲ್‌ಬಂದಿ, ಪ್ರಶಸ್ತಿ ಪ್ರದಾನ ಸವಾರಂಭ ಜರುಗಲಿದೆ. ಸಂಜೆ 6.30ಕ್ಕೆ ಶ್ರೀನಿವಾಸ ಬಳ್ಳಮಂಜ ಭಾಗವತಿಕೆಯಲ್ಲಿ ‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ. ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಹರೀಶ್ ಬಳಂತಿಮೊಗರು, ದಿನೇಶ್ ಕಾವಳಕಟ್ಟೆ ಇರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net