ಗುರು ಪೂರ್ಣಿಮೆ ಹಿನ್ನೆಲೆ ಪೂಜಾ ಕೈಂಕರ್ಯ

ಗುರು ಪೂರ್ಣಿಮೆ ಹಿನ್ನೆಲೆ ಪೂಜಾ ಕೈಂಕರ್ಯ
Published on

ಹಿರೀಸಾವೆ: ಗುರು ಪೂರ್ಣಿಮೆ ಪ್ರಯುಕ್ತ ಸದ್ಗುರು ಸಾಯಿ ಸಿದ್ಧಾಶ್ರಮದಲ್ಲಿ ಭಾನುವಾರ ವಿವಿಧ ಹೋಮ ಹಾಗೂ ಪೂಜೆಗಳನ್ನು ಏರ್ಪಡಿಸಲಾಗಿದೆ ಎಂದು ಸಿದ್ದಾಶ್ರಮದ ಶ್ರೀ ಗುರುಮೂರ್ತಿ ಗುರೂಜಿ ಹೇಳಿದರು.

ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಮಂದಿರದಲ್ಲಿ ಇತ್ತೀಚೆಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪ್ರತಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾನುವಾರ ಬೆಳಗ್ಗೆ ಗಂಗಾಪೂಜೆ, ಗಣಹೋಮ ವ್ಯಾಸ ಪೂಜೆ, ಸದ್ಗುರು ಪೂಜೆ, ಭಿಕ್ಷಾವಂದನೆ ಮತ್ತು ಕುಂಭಾಭಿಷೇಕ ಸೇರಿದಂತೆ ಹಲವು ಪೂಜೆಗಳು ನಡೆಯಲಿವೆ. ಮಧ್ಯಾಹ್ನದ ಆರತಿ, ಸಾಯಿಭಜನೆ ಮತ್ತು ಸಂಜೆ ಆರತಿ ನಡೆಯಲಿದೆ. ಭಕ್ತರ ಸಹಕಾರದಿಂದ ಈ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರ ಚಂದ್ರಶೇಖರ ಗುರೂಜಿ ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ವಿಚಾರಗಳನ್ನು ತಿಳಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ರ್ಯಕ್ರಮವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಸಂಸದ ಶ್ರೇಯಸ್ ಎಂ.ಪಟೇಲ್, ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಅಧ್ಯಕ್ಷ ವೇಣುಕುಮಾರ್, ಪ್ರಮುಖರಾದ ಎಚ್.ಬಿ.ಮದನಗೌಡ, ರವಿನಾಕಲಗೂಡು ಮಾತನಾಡಿದರು.
ಸಂಘದ ಅಧ್ಯಕ್ಷ ಸಿದ್ದರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಯಿ ಮಂದಿರದ ಯೋಗಿ ಶಿವಾನಂದ ಗುರೂಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ ಇತರರು ಇದ್ದರು.

ಪತ್ರಕರ್ತರಾದ ನಟೇಶ್, ದಯಾನಂದ ಹಾಗೂ ಪ್ರತಿಕಾ ವಿತರಕ ಹಿರೀಸಾವೆ ಮಂಜುನಾಥ್ ಮತ್ತು ಜಿನ್ನೇನಹಳ್ಳಿಯ ಶರತ್ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net