ನಾಗಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ

10-KGL-1,, ()
ಪಟ್ಟಣದ ನಾಗಸಾಯಿ ಮಂದಿರದ ಶಿರಡಿ ಸಾಯಿ ದೇವರ ಮೂರ್ತಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿರುವುದು.
Published on

ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ನಾಗಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಸಮಾರಂಭ ಪ್ರಯುಕ್ತ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ಮುಂಜಾನೆ ದೇವರಿಗೆ ಹಾಲಭಿಷೇಕ, ಮಹಾ ಮಂಗಳಾರತಿ ಹಾಗೂ ಪಲ್ಲಕ್ಕಿ ಉತ್ಸವ ಮೂರ್ತಿಗೆ ಅಭಿಷೇಕ ಹಾಗೂ ದೇವಾಲಯ ಪ್ರಾಂಗಣದಲ್ಲಿ ಉಯ್ಯಲೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಬಳಿಕ ಉತ್ಸವ ಮೂರ್ತಿಯ ಪಲ್ಲಕ್ಕಿಯಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಯಿತು. ನಾಗಸಾಯಿ ಮಂದಿರ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ದೇವಾಲಯ ಪ್ರಧಾನ ಅರ್ಚಕ ವಿ.ಮಧುಸೂದನ್ ಅವರ ಸಾನಿಧ್ಯದಲ್ಲಿ ಧಾರ್ಮಿಕವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ಗುರುಪೂರ್ಣಿಮಾ ವಿಶೇಷ ಪೂಜೆಗೆ ಕೊಳ್ಳೇಗಾಲ ಪಟ್ಟಣ ಸೇರಿದಂತೆ ಹನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದವಾಗಿ ಪುಳಿಯೋಗರೆ, ಮೊಸರನ್ನ, ರಾಗಿ ಹಂಬಲಿ ಮತ್ತು ಪಂಚಾಮೃತ, ದೇವರಿಗೆ ಅಭಿಷೇಕ ಮಾಡಿದ ಹಾಲನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಾಯದ ಶ್ರೀ ಶಿರಡಿ ಸತ್ಯಸಾಯಿ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net