ವಿದ್ಯೆ-ಸಂಸ್ಕಾರ ಕಲಿಸುವ ಗುರುವೇ ಕಣ್ಣಿಗೆ ಕಾಣುವ ದೇವರು: ಯೋಗ ಶಿಕ್ಷಕಿ ಸುಜಾತ ಅಭಿಮತ

yoga
Published on

ಬೆಂಗಳೂರು: ವಿದ್ಯೆ, ಸಂಸ್ಕಾರ, ಜೀವನ ಸಾಗಿಸುವ ಹಾದಿಯಲ್ಲಿ ನಡೆಯುವ ಗುಣವನ್ನು ಕಲಿಸುವ ವ್ಯಕ್ತಿಯೇ ನಿಜವಾದ ಗುರು ಎಂದು ಪತಂಜಲಿ ಯೋಗ ಕೇಂದ್ರದ ಯೋಗ ಶಿಕ್ಷಕಿ ಸುಜಾತ ತಿಳಿಸಿದ್ದಾರೆ.

ಶಿವನಪಾಳ್ಯ ಬಳಿಯ ನೇತಾಜಿ ಬಡಾವಣೆ (ಶಿರ್ಕೆ) ರಾಧಕೃಷ್ಣ ಶಾಲೆಯಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಾ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿದ್ದರೆ ಗುರಿವಿಗೆ ಸೇವೆ ಸಲ್ಲಿಸುವಂತಾಗುತ್ತದೆ. ಆ ಮೂಲಕ ಭಗವಂತನನ್ನು ಕಾಣಬಹುದು ಎಂದರು.

ಎನ್​.ಲತಾ ಮಾತನಾಡಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಶಿಕ್ಷಣ, ಯೋಗ, ಧ್ಯಾನ, ಸಂಸ್ಕಾರ ಕಲಿಸುವ ಗುರು ಭಗವಂತನ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.

ಯೋಗ ಪಟುಗಳಾದ ಪಾರ್ವತಿ, ವೀಣಾ, ಗೌರಮ್ಮ, ಚೇತನ, ಶಿಲ್ಪ, ಯಶೋಧಮ್ಮ, ಸವಿತ, ಲ್ಮ, ಕವಿತ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net