

ಬೇಲೂರು: ತಾಲೂಕಿನ ಮದಘಟ್ಟ ಸಮೀಪದ ಗಾಂಧಾರ ಬುದ್ಧ ವಿಹಾರದಲ್ಲಿ ಭಾನುವಾರ ಗುರು ಪೂರ್ಣಿಮೆಯನ್ನು ಬೌದ್ಧ ಉಪಾಸಕರು, ಅನುಯಾಯಿಗಳು ವಿಶೇಷ ತಿಸರಣ, ಪಂಚಶೀಲ ಪೂಜೆಯೊಂದಿಗೆ ಆಚರಿಸಿದರು.
ಗಾಂಧಾರ ಬುದ್ಧ ವಿಹಾರ ಟ್ರಸ್ಟ್ ಕಾರ್ಯದರ್ಶಿ ಕುಮಾರ್‌ಗುಪ್ತ ಮಾತನಾಡಿ, ಈ ದಿನದಂದು ವಿಶೇಷವಾಗಿ ಭಗವಾನ್ ಗೌತಮ ಬುದ್ಧರು ತನ್ನ ಐದು ಜನ ಶಿಷ್ಯರಿಗೆ ಧಮ್ಮವನ್ನು ಬೋಧಿಸಿದ ದಿನವಾಗಿದೆ. ಈ ದಿನವನ್ನು ಪ್ರಪಂಚದ ಎಲ್ಲ ಬೌದ್ಧ ರಾಷ್ಟ್ರಗಳಲ್ಲೂ ಬಹು ದೊಡ್ಡ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅದೇ ರೀತಿ ನಮ್ಮ ಗಾಂಧಾರ ಬುದ್ಧ ವಿಹಾರದಲ್ಲೂ ಕೆಲ ವರ್ಷಗಳಿಂದ ವಿಶೇಷವಾಗಿ ಆಚರಿಸಿದ್ದೇವೆ ಎಂದರು.
ಟ್ರಸ್ಟ್ ಖಜಾಂಚಿ ಮಂಜುನಾಥ್ ಮೊಗಸಾವರ, ಜಿಲ್ಲಾ ಉಪಾಧ್ಯಕ್ಷ ವಿರೂಪಾಕ್ಷ ಎಡೇಹಳ್ಳಿ, ಟ್ರಸ್ಟ್ ವ್ಯವಸ್ಥಾಪಕ ಶಿವರಾಜ್ ಮದಘಟ್ಟ, ಸದಸ್ಯ ಹರೀಶ್, ಮಾಧ್ಯಮ ಕಾರ್ಯದರ್ಶಿ ಪ್ರವೀಣ್ ಬಳದಕಲ್ಲು, ಅಣ್ಣಪ್ಪ ಮಧಘಟ್ಟ, ರಮೇಶ್, ಮಹಿಳಾ ಉಪಾಸಕರು ಇದ್ದರು.