

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ಸೆ.7ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಗುರುಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಘದ ಮಾಜಿ ಅಧ್ಯಕ್ಷ ಪೀತಾಂಬಾರ ಹೆರಾಜೆ ಬಿಡುಗಡೆಗೊಳಿಸಿದರು.
ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮಾಜಿ ಅಧ್ಯಕ್ಷ ಭಗೀರಥ ಜಿ., ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ನಿತೀಶ್ ಎಚ್., ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್, ನಿರ್ದೇಶಕರಾದ ಉಷಾ ಶರತ್, ವಿನೋದಿನಿ ರಾಮಪ್ಪ, ರವೀಂದ್ರ ಅಮೀನ್, ಸುನೀಲ್ ಕನ್ಯಾಡಿ, ವಿಶ್ವನಾಥ ಪೂಜಾರಿ, ಜಯ ಕುಮಾರ್ ನಡ, ಚಂದ್ರಶೇಖರ, ರೂಪೇಶ್ ಧರ್ಮಸ್ಥಳ, ಅನೂಪ್ ಬಂಗೇರ, ಗ್ರಾಮ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ ಕುಕ್ಕೇಡಿ, ಲಕ್ಷ್ಮಣ ಪೂಜಾರಿ, ಗೋಪಾಲ ಪೂಜಾರಿ ಪುದುವೆಟ್ಟು, ವಸಂತ ಮತ್ತು ಸುನೀಲ್ ಸುಲ್ಕೇರಿ, ದಿವಾಕರ ಸಾಲ್ಯಾನ್ ನಡ, ನಾಗೇಶ್ ಆದೇಲು ಉಪಸ್ಥಿತರಿದ್ದರು.