

ಗೌರಿಬಿದನೂರು: ಅನುದಾನ ಕೊರತೆಯಿಂದಾಗಿ ನಗರದ ಮಾದನಹಳ್ಳಿ ಕೆರೆಯಂಗಳದಲ್ಲಿ ನಿರ್ಮಿಸುತ್ತಿರುವ ಗುರುಭವನ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
ಶಿಕ ಸಮುದಾಯಕ್ಕೆ ಅನುಕೂಲವಾಗಲೆಂದು ಸುಮಾರು ಒಂದು ಕೋಟಿ ರೂ. ವೆಚ್ಚದ ಗುರುಭವನ ಕಾಮಗಾರಿಗೆ 2021ರಲ್ಲಿ ಅಂದಿನ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಚಾಲನೆ ನೀಡಿದ್ದರು. ಮೊದಲಿಗೆ ಶಾಸಕರ ಅನುದಾನದಲ್ಲಿ 15 ಲ ರೂ. ಒದಗಿಸಿದ್ದರು. ಶಿಕರಿಂದ ಸಂಗ್ರಹಿಸಿದ ಸುಮಾರು 12.49 ಲ ರೂ. ದೇಣಿಗೆ, ಸರ್ಕಾರದ ಟೀಚರ್ಸ್ ಬೆನಿಫಿಟ್ ಂಡ್ ಯೋಜನೆಯಡಿ 20 ಲ ರೂ., ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ 10 ಲ ರೂ. ಸೇರಿ ದಾನಿಗಳು ಕೂಡ ಸ್ವಲ್ಪಮಟ್ಟಿಗೆ ಅನುದಾನ ಒದಗಿಸಿದ್ದರು. ಅಂದು ವೇಗವಾಗಿ ಆರಂಭಗೊಂಡ ಕಾಮಗಾರಿ ದಿನಗಳದಂತೆ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 70 ಲಕ್ಷ ರೂ. ಅನುದಾನ ಅವಶ್ಯಕತೆಯಿರುವುದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ.
ಶಿಕ ಸಮುದಾಯಕ್ಕೆ ಅನುಕೂಲ
ತಾಲೂಕಿನಲ್ಲಿ 838 ಪ್ರಾಥಮಿಕ ಶಾಲೆ ಶಿಕರು, 196 ಪ್ರೌಢಶಾಲೆ ಶಿಕರು ಸೇರಿ ಅನುದಾನಿತ ಶಿಣ ಸಂಸ್ಥೆಯಲ್ಲಿ 1,000ಕ್ಕೂ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುಭವನ ಪೂರ್ಣಗೊಂಡಲ್ಲಿ ಶಿಣ ಇಲಾಖೆ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀೆಗಳ ತರಬೇತಿ ನೀಡಬಹುದು. ಅಲ್ಲದೆ ಸಮುದಾಯ ಭವನದಲ್ಲಿ ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ನೀಡಿದಲ್ಲಿ ಆದಾಯ ಕೂಡ ಬರಲಿದೆ. ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಈ ಬಗ್ಗೆ ಗಮನ ಹರಿಸಿ ಭವನದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಜರುಗಿಸಿದಲ್ಲಿ ಶಿಕ ಸಮುದಾಯಕ್ಕೆ ಅನುಕೂಲವಾಗಲಿದೆ ಎನ್ನುವುದು ಶಿಕ್ಷಕರ ಆಶಯವಾಗಿದೆ.
ಶಿಕರ ಬಹುದಿನಗಳ ಬೇಡಿಕೆಯಂತೆ ಸುಮಾರು ಒಂದು ಎಕರೆ ವಿಶಾಲವಾದ ಪ್ರದೇಶದಲ್ಲಿ ಗುರುಭವನ ನಿರ್ಮಿಸಲಾಗುತ್ತಿದೆ. ಮಾಜಿ ಶಾಸಕ ಶಿವಶಂಕರ ರೆಡ್ಡಿ ಅವರು ವೈಯಕ್ತಿಕ ಕಾಳಜಿ ವಹಿಸಿ ಕಾಮಗಾರಿಗೆ ಚಾಲನೆ ನೀಡಿ ಅನುದಾನ ಒದಗಿಸಿದ್ದರು. ಹಾಲಿ ಶಾಸಕ ಪುಟ್ಟಸ್ವಾಮಿ ಗೌಡರು ಅಗತ್ಯ ಅನುದಾನ ಒದಗಿಸಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ.
ಎನ್.ಜಿ. ರೆಡ್ಡಪ್ಪ ಅಧ್ಯಕ್ಷ, ತಾಲೂಕು ಪ್ರಾಥಮಿಕ ಶಾಲಾ ಶಿಕರ ಸಂ
ಸರ್ಕಾರದಿಂದ ಟೀಚರ್ಸ್ ಬೆನಿಫಿಟ್ ಯೋಜನೆಯಲ್ಲಿ ಇನ್ನೂ 30 ಲ ರೂ. ಅನುದಾನ ಸಿಗಲಿದೆ. ಇತರ ಕಡೆಯಿಂದ ಅನುದಾನ ಒದಗಿಸಿದಲ್ಲಿ ಭವನದ ಕಾಮಗಾರಿ ಶ್ರೀ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಲಾಗುವುದು.
ಶ್ರೀನಿವಾಸ್ ಮೂರ್ತಿ ೇತ್ರ ಶಿಣಾಧಿಕಾರಿ