ಕುಂದಾಪುರದಲ್ಲಿ ಗುಮಟ್ ಗಿನ್ಯಾನ್ ತರಬೇತಿ

gan
Published on

ಕುಂದಾಪುರ: ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಹಾಗೂ ಸಂತ ಫ್ರಾನ್ಸಿಸ್ ಚರ್ಚ್ ಸಹಯೋಗದಲ್ಲಿ ಗುಮಟ್ ಗಿನ್ಯಾನ್ ತರಬೇತಿ ಕಾರ್ಯಾಗಾರ ಕುಂದಾಪುರದ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಪ್ರಿಯನ್ ಮೆಂಡೋನ್ಸ ಅವರು ಕೊಂಕಣಿ ಸಂಗೀತ ಸಂಪ್ರದಾಯದ ಗುಮ್ಟಾ ವಾದನ ಬಾರಿಸಿ ತರಬೇತಿ ಉದ್ಘಾಟಿಸಿದರು. ಪ್ರಮುಖರಾದ ವಿಕ್ಟರ್ ಮಥಾಯಸ್, ಡೆಲ್ಟನ್ ಲೋಬೊ, ಜೀವನ್ ಸಿದ್ದಿ, ಜೆನ್ವಿಟ ಲೋಬೊ ಹಾಗೂ ನಿಕೊಲಾ ಮೊರಾಸ್ ತರಬೇತಿ ನೀಡಿದರು.

ಧರ್ಮಗುರು ಎಡ್ವಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕೆಲ್ವಿನ್ ಮೆಂಡೋನ್ಸಾ ಸ್ವಾಗತಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ಇಪ್ಪತ್ತು ಆಯೋಗಗಳ ಸಂಚಾಲಕರು ವಂದಿಸಿದರು. 50 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net