ಜನಸೇವೆಗೆ ಲಯನ್ಸ್ ಉತ್ತಮ ವೇದಿಕೆ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ ಜನಸೇವೆಗೆ ಸಿಗುವ ಅವಕಾಶಗನ್ನು ಬಳಸಿಕೊಂಡು ಸೇವೆಯನ್ನು ಮಾಡಬೇಕು, ಸಹನೆ ತಾಳ್ಮೆ ಇದ್ದಾಗ ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ. ನಾಯಕತ್ವದ ಗುಣವಿರುವ ಆಶಾ ಶೆಟ್ಟಿ ತಂಡದವರು ಲಯನ್ಸ್ ಮೂಲಕ ಸೇವೆ ಮಾಡಲಿದ್ದಾರೆ ಎಂದು ಹೆಬ್ರಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು. ಬುಧವಾರ ಇಕ್ಕೋಡ್ಲು ಹೋಮ್ ಸ್ಟೇನಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ ಮತ್ತು ತಂಡದ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಯನ್ಸ್ ಜಿಲ್ಲಾ ಚೀಫ್ ಕೋಆರ್ಡಿನೇಟರ್ ನೀರೆಬೈಲೂರು ಉದಯಕುಮಾರ್ ಹೆಗ್ಡೆ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥೆಯಲ್ಲಿ ಈಗ 13 ಲಕ್ಷ ಸದಸ್ಯರಿದ್ದಾರೆ. ಅದನ್ನು 15 ಲಕ್ಷಕ್ಕೆ ಏರಿಸುವ ಗುರಿಯನ್ನು ಅಂತರಾಷ್ಟ್ರೀಯ ಅಧ್ಯಕ್ಷರು ಹೊಂದಿದ್ದಾರೆ. ಅದನ್ನು ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು. ಭುಜಂಗ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್ ಹಾಗೂ ಜಯರಾಮ ಶೆಟ್ಟಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ, ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಸುರೇಶ ಶೆಟ್ಟಿ, ವಲಯಾಧ್ಯಕ್ಷ ಸತೀಶ ಶೆಟ್ಟಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹರೀಶ ಶೆಟ್ಟಿ ನಾಡ್ಪಾಲು, ಕೋಶಾಧಿಕಾರಿ ಪ್ರಸಾದ್ ರೈ, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಟಿ.ಜಿ.ಆಚಾರ್ಯ, ಬೇಳಂಜೆ ಹರೀಶ ಪೂಜಾರಿ, ರಮೇಶ್ ಆಚಾರ್ಯ ಸಹಕರಿಸಿದರು. ಡಾ.ಭಾರ್ಗವಿ ಆರ್.ಐತಾಳ್, ಸ್ನೇಹಲತಾ ಟಿ.ಜಿ., ಸುಜಾತ ಹರೀಶ್ ನಿರೂಪಿಸಿದರು. ನಾಗೇಶ ನಾಯಕ್ ಸೀತಾನದಿ ಸ್ವಾಗತಿಸಿದರು.

ಗೌರವ, ಪ್ರತಿಭಾ ಪುರಸ್ಕಾರ

ಲಯನ್ಸ್ ಜಿಲ್ಲಾ ಚೀಫ್ ಕೋಆರ್ಡಿನೇಟರ್ ನೀರೆಬೈಲೂರು ಉದಯ ಕುಮಾರ್ ಹೆಗ್ಡೆ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್ ದಂಪತಿಯನ್ನು ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಶಿವಪುರ ಮೂರ್ಸಾಲು ಡಾ.ಪುಪ್ಪರಾಜ್ ಎಂ.ನಾಯಕ್, ಬೈಲೂರು ಉದಯಕುಮಾರ್ ಹೆಗ್ಡೆ, ಆಶಾ ಭುಜಂಗ ಶೆಟ್ಟಿ, ಹರೀಶ ಶೆಟ್ಟಿ ನಾಡ್ಪಾಲು ಸಹಿತ ಹಲವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ರಾಮಚಂದ್ರ ಐತಾಳ್ ವಿದ್ಯಾರ್ಥಿ ನಿಧಿ ನೀಡಿದರು. ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರನ್ನು ಗೌರವಿಸಲಾಯಿತು. ಚಿರಾಗ್ ಆರ್.ಪೂಜಾರಿ ಮತ್ತು ಸಮೀಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net