ಗ್ರಾಮೀಣರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿ

IMG-20230727-WA0034
Published on

ಕಲಬುರಗಿ:
ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತು ಸಾಮಾಜಿಕ ಪ್ರಜ್ಞೆ ಮೂಡಿಸಬೇಕು. ಜತೆಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಜಿ.ಕಣ್ಣೂರ್ ಹೇಳಿದರು.
ಕಲಬುರಗಿಯ ಎನ್.ವಿ.ಸಂಸ್ಥೆಯ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಗುಲ್ಬರ್ಗ ವಿವಿ ಸಹಯೋಗದೊಂದಿಗೆ ಜಿಲ್ಲೆಯ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮದಲ್ಲಿ ಆಯೋಜಿಸಿದ ಎನ್‌ಎಸ್‌ಎಸ್ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು, ಬದ್ಧತೆ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಪರಿಶ್ರಮ ಪಟ್ಟಾಗ ಯಶಸ್ಸು ಸಾಧ್ಯ. ರಾಷ್ಟಿçÃಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಗ್ರಾಮೀಣ ಜನರಲ್ಲಿ ಸಾಮಾನ್ಯ ಜ್ಞಾನ ಮೂಡಿಸಲು ಶ್ರಮಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಗುಂಡೇರಾವ್, ಪಿಡಿಒ ಮಹಾನಂದಾ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎನ್‌ವಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀಕಾಂತ ಏಖಳೀಕರ್ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಮುಖ್ಯ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಗೋವಿಂದ ಪೂಜಾರ್, ನಿವೃತ್ತ ಪ್ರಾಚಾರ್ಯ ಪ್ರೊ.ಯು.ಜಿ.ಸರ್ ದೇಶಪಾಂಡೆ, ಎಂ.ಬಿ. ಮೋರೆ ಉಪಸ್ಥಿತರಿದ್ದರು.
ಡಾ.ಗುರುರಾಜ ಕರ್ಜಗಿ, ಜಿತೇಂದ್ರ ಕೋಥಳೀಕರ್, ನಾಗರಾಜ ಕುಲಕರ್ಣಿ, ಡಾ ಕಾಶಿನಾಥ ನೂಲಕರ್, ಶರಣಪ್ಪ ಇದ್ದರು. ಸೌಜನ್ಯ ,ರಕ್ಷಿತಾ ಸ್ವಾಗತ ಗೀತೆ ಹಾಡಿದರು. ಸ್ವಾತಿ ಮತ್ತು ಸಂಗಡಿಗರು ಎನ್‌ಎಸ್‌ಎಸ್ ಗೀತೆ ಹಾಡಿದರು. ಡಾ.ದಯಾನಂದ ಶಾಸ್ತಿçà ಸ್ವಾಗತಿಸಿದರು. ಡಾ.ಮಲ್ಲಿನಾಥ ತಳವಾರ್ ನಿರೂಪಿಸಿದರು.. ಅಭಿಷೇಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net