

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ. ಮೇಲೆ ಪ್ರೊಫೆಸರ್ನಿಂದಲೇ ಹಲ್ಲೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ. ಡಾ. ಜಿ.ಎಂ. ವಿದ್ಯಾಸಾಗರ ಹಲ್ಲೆಗೊಳಗಾದವರು. ಈ ಕೃತ್ಯವೆಸಗಿದ್ದು, ಇದೇ ವಿವಿಯ ಮನೋಶಾಸ್ತ್ರ ವಿಭಾಗದ ಹಿರಿಯ ಪ್ರೊ. ಎಸ್.ಪಿ. ಮೇಲಕೇರಿ.
ಇದನ್ನೂ ಓದಿರಿ ಹಾಲು ಖರೀದಿ ದರ 2 ರೂಪಾಯಿ ಇಳಿಕೆ!
ಡಾ.ವಿದ್ಯಾಸಾಗರ ಅವರ ಕಚೇರಿಗೆ ಪ್ರಾಧ್ಯಾಪಕಿ ಪ್ರತಿಮಾ ಮಠ ಅವರೊಂದಿಗೆ ಮಂಗಳವಾರ ಸಂಜೆ ತೆರಳಿದ ಪ್ರೊ. ಎಸ್.ಪಿ. ಮೇಲಕೇರಿ, ಅವಾಚ್ಯವಾಗಿ
ವಿವಿಯಲ್ಲಿನ ಕೆಲ ಉಪನ್ಯಾಸಕರ ದರ್ಪಕ್ಕೆ ಈ ಹಲ್ಲೆ ಘಟನೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಕಲಿಸಬೇಕಾದ ಉಪನ್ಯಾಸಕರೇ ಹೊಡೆದಾಟಕ್ಕಿಳಿದರೆ ವಿವಿ ಗತಿಯೇನು? ಇಂತಹ ಕೆಟ್ಟ ಸಂಸ್ಕೃತಿ ನಾಶವಾಗಲು ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬಂದಿದೆ.