ಕೃಷ್ಣಮಠದಲ್ಲಿ ಗೂಡುದೀಪ ಸ್ಪರ್ಧೆ

goodudeepa
Published on

ಉಡುಪಿ: ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವಜನಿಕರಿಗಾಗಿ ಅ.27ರಂದು ಮಧ್ಯಾಹ್ನ 2ರಿಂದ 5ರವರೆಗೆ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ 8000ರೂ., ದ್ವಿತೀಯ 5000, ತೃತೀಯ 3000ರೂ. ಹಾಗೂ ತಲಾ ಒಂದು ಸಾವಿರ ರೂ. ಮೊತ್ತದ 2 ಸಮಾಧಾನಕರ ಬಹುವಾನ, ಆಧುನಿಕ ವಿನ್ಯಾಸ ಗೂಡುದೀಪಕ್ಕೆ ಪ್ರಥಮ 5000, ದ್ವಿತೀಯ 3000 ಹಾಗೂ ತೃತೀಯ 2000 ಹಾಗೂ ತಲಾ ಒಂದು ಸಾವಿರ ರೂ. ಮೊತ್ತದ 2 ಸಮಾಧಾನಕರ ಬಹುವಾನ ನೀಡಲಾಗುವುದು.

ಒಂದುಗೂಡು ದೀಪದಲ್ಲಿ ಗರಿಷ್ಠ ಎರಡು ಜನ ಸ್ಪರ್ಧಾಳುಗಳು ಭಾಗವಹಿಸಬಹುದು. ಭಾಗವಹಿಸಿದ ಎಲ್ಲ ಸ್ಪರ್ದಾಳುಗಳಿಗೂ ಪ್ರೋತ್ಸಾಹ ಧನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಗೂಡುದೀಪಗಳನ್ನು 15 ದಿನ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪ್ರದರ್ಶಿಸಲಾಗುವುದು. ಬಳಿಕ ಸ್ಪರ್ಧಾಳುಗಳಿಗೆ ಹಿಂತಿರುಗಿಸಲಾಗುವುದು. ಮಾಹಿತಿಗೆ ಈಶ್ವರ ಚಿಟ್ಪಾಡಿ (9916009660) ಅಥವಾ ಕೇಶವ ಆಚಾರ್ಯ ದೊಡ್ಣಗುಡ್ಡೆ (9632287917) ಇವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net