ಹೆಬ್ರಿ: ಪತ್ರಿಕೆಯು ವಿದ್ಯಾರ್ಥಿಗಳ ಓದು ಮತ್ತು ಬರವಣಿಗೆ ಕೌಶಲ ಹೆಚ್ಚಿಸುತ್ತದೆ. ಅಮೃತಭಾರತಿ ಸಂಸ್ಥೆ ಅಮೃತವಾಣಿ ಪತ್ರಿಕೆ ಮೂಲಕ ಹನ್ನೆರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿದೆ ಎಂದು ಪತ್ರಿಕೆ ಅನಾವರಣ ಸಮಾರಂಭ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಹೇಳಿದರು.

ಅಮೃತ ಭಾರತಿ ಸಭಾಂಗಣದಲ್ಲಿ ಜುಲೈ ಮತ್ತು ಆಗಸ್ಟ್ ಮಾಸದ ಅಮೃತವಾಣಿ ಪತ್ರಿಕೆ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ಅಮೃತವಾಣಿಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕ ಮಹೇಶ ಹೈಕಾಡಿ ಶುಭಹಾರೈಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ವಿಜಯಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಭಟ್ ಮುದ್ರಾಡಿ, ನಾಗರಾಜ ಮಕ್ಕಿತ್ತಾಯ ನೀಲಾವರ, ವಿದ್ಯಾರ್ಥಿಗಳಾದ ಸಜನಿ ಭಟ್, ವಾದಿರಾಜ ಮಕ್ಕಿತ್ತಾಯ, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಕಾವ್ಯ ಸ್ವಾಗತಿಸಿದರು. ಧೃತಿ ವಂದಿಸಿದರು. ಐಶ್ವರ್ಯಾ ನಿರೂಪಿಸಿದರು.