

ಗಂಗೊಳ್ಳಿ: ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ನಡೆಯಿತು.
ಷಷ್ಠಿ ಮಹೋತ್ಸವದ ಪ್ರಯುಕ್ತ ತುಲಾಭಾರ ಸೇವೆ, ಮಡೆ ಪ್ರದಕ್ಷಿಣೆ, ತೊಟ್ಟಿಲು ಹರಕೆ, ಹಣ್ಣು ಕೊನೆ ಸೇವೆ, ತನು ಸೇವೆ, ಬೆಳ್ಳಿ ಹರಕೆ, ಹರಿವಾಣ ನೈವೇದ್ಯ ಸೇವೆ ಮೊದಲಾದವುಗಳು ನಡೆಯಿತು.