Road Problem: 1 ತಿಂಗಳಲ್ಲಿ ಗುಡ್ಡಳ್ಳಿ ರಸ್ತೆ ಕಾಮಗಾರಿ ಮಾಡಲು ಡಿಸಿ Order

Road Problem
Published on

ಕಾರವಾರ: ಗುಡ್ಡಳ್ಳಿ ರಸ್ತೆ ಸಮಸ್ಯೆಯನ್ನು (Road Problem) 2025 ರ ಜನವರಿ 15 ರ ಒಳಗೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಆಗಿನ ಶಾಸಕಿ ರೂಪಾಲಿ ನಾಯ್ಕ ಅವರ ಅವಽಯಲ್ಲಿ 50 ಲಕ್ಷ ರೂ.ಗಳನ್ನು ಗುಡ್ಡಳ್ಳಿ ರಸ್ತೆ ಡಾಂಬರೀಕರಣಕ್ಕೆ ಮಂಜೂರು ಮಾಡಿದ್ದರು. ಗುತ್ತಿಗೆ ಪಡೆದ ಸಿದ್ಧಾರ್ಥ ಮಾಧವ ನಾಯ್ಕ ಅವರು ಟೆಂಡರ್ ಪಡೆದು, 2023 ರಲ್ಲಿ ಕಾಮಗಾರಿ ಪ್ರಾರಂಭಿಸಿದ್ದರು.

1 ವರ್ಷವಾದರೂ ಪೂರ್ಣಗೊಳಿಸದೇ ರಸ್ತೆಯ ಪಕ್ಕದಲ್ಲಿ ಹೊಂಡ ತೆಗೆದು ಇರಿಸಿದ್ದಾರೆ. ರಸ್ತೆಯ ಮೇಲೆ ಜಲ್ಲಿ ಹಾಕಿ ಮಳೆಯ ನೀರು ಸರಿಯಾಗಿ ಹಾದು ಹೋಗಲು ವ್ಯವಸ್ಥೆ ಮಾಡದ ಕಾರಣ ಮಳೆಗಾಲದಲ್ಲಿ ಉತ್ತಮವಾಗಿದ್ದ ಅಲ್ಪ ಕಚ್ಚಾ ರಸ್ತೆಯೂ ಹಾಳಾಗಿ ಹೋಗಿದೆ.

ನಗರಸಭೆಯ ವ್ಯಾಪ್ತಿಗೆ ಬರುವ ಗ್ರಾಮ ಇದಾಗಿದ್ದು, 30 ಕುಟುಂಬಗಳು ಗುಡ್ಡದ ಮೇಲೆ ಇವೆ. ಸುಮಾರು ನಾಲ್ಕು ಕಿಮೀ ಕಾಲ್ನಡಿಗೆಯಲ್ಲಿ ಹೋಗಬೇಕಾದ ದುಸ್ಥಿತಿ ಜನರದ್ದಾಗಿದೆ. ಗ್ರಾಮದಲ್ಲಿ ಉದ್ಯೋಗವಿಲ್ಲದ ಕಾರಣ ಗ್ರಾಮಸ್ಥರು ಉದ್ಯೋಗಕ್ಕಾಗಿ ಪ್ರತಿ ದಿನ ಓಡಾಟ ಮಾಡುತ್ತಿದ್ದಾರೆ.

ಇತ್ತೀಚೆಗೆ ವೃದ್ಧರೊಬ್ಬರು ಮೃತಪಟ್ಟಾಗ Road Problem ನಿಂದಾಗಿ ಅವರ ಶವವನ್ನು ಜೋಲಿ ಕಟ್ಟಿಕೊಂಡು ಸಾಗಿಸಲಾಯಿತು. ಅನಾರೋಗ್ಯಕ್ಕೊಳಗಾದ ಗರ್ಭಿಣಿಯರು, ಹಿರಿಯ ನಾಗರಿಕರನ್ನು ಇಂದಿಗೂ ಜೋಲಿ ಕಟ್ಟಿಕೊಂಡು ಹೊತ್ತು ಆಸ್ಪತ್ರೆಗೆ ಸಾಗಿಸುವ ದುಸ್ಥಿತಿ ಕಾರವಾರ ನಗರಸಭೆ ವ್ಯಾಪ್ತಿಯಲ್ಲೇ ಇದೆ ಎಂಬುದು ದುರಂತ ಎಂದು ಗ್ರಾಮಸ್ಥರು ಗೋಳು ತೋಡಿಕೊಂಡರು.

Road Problem ಸ್ಪಂದಿಸದ ಗುತ್ತಿಗೆದಾರ

ಗ್ರಾಮಸ್ಥರ ನೋವು ಪರಿಹರಿಸಲು ಅನುದಾನ ಮಂಜೂರಾದರೂ, ಈ ಕುರಿತು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ವಾರ್ಡ್ ಸದಸ್ಯೆ ರುಕ್ಮಿಣಿ ಗೌಡ ಅವರು ಮನವಿ ಮಾಡಿಕೊಂಡರೂ ಅದಕ್ಕೆ ಲೋಕೋಪಯೋಗಿ ಅಧಿಕಾರಿಗಳು, ಗುತ್ತಿಗೆದಾರ ಸ್ಪಂದಿಸಿಲ್ಲ.

ನಾವು ಅವರಿವರ ಬಳಿ ದೇಣಿಗೆ ಪಡೆದು, ಅಲ್ಪಸ್ವಲ್ಪ ಸರಿ ಮಾಡಿಕೊಂಡಿದ್ದ ಕಚ್ಚಾ ರಸ್ತೆಯನ್ನೂ ಗುತ್ತಿಗೆದಾರ ಕಾಮಗಾರಿ ನೆಪದಲ್ಲಿ ಹಾಳು ಮಾಡಿದ್ದಾರೆ. ಎಂದು ಗ್ರಾಮಸ್ಥರು ದೂರಿದರು.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರನ್ನು ಕರೆಸಿದ ಜಿಲ್ಲಾDiಕಾರಿ ಲಕ್ಷ್ಮೀಪ್ರಿಯಾ ಅವರು, ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಬೇಕು. ಇಲ್ಲದೇ ಇದ್ದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪು÷್ಪ ಪಟ್ಟಿಗೆ ಸೇರಿಸಬೇಕು ಎಂದು ಎಚ್ಚರಿಕೆ ನೀಡಿದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ವಾರ್ಡ್ ಸದಸ್ಯೆ ರುಕ್ಮಿಣಿ ಗೌಡ ನೇತೃತ್ವದಲ್ಲಿ ಗ್ರಾಮದ ಸಾಕಷ್ಟು ಜನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net