ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

New Project (28)
Published on

ಗುರುಪುರ: ಮಂಗಳೂರು ಮಹಾನಗರ ಪಾಲಿಕೆಯ 57 ಲಕ್ಷ ರೂ.ಅನುದಾನದಲ್ಲಿ ಕಾವೂರು 18ನೇ ವಾರ್ಡ್‌ನ ಆಕಾಶಭವನ ಮುಖ್ಯರಸ್ತೆಗೆ ಡಾಮರು ಅಳವಡಿಕೆ ಮತ್ತು ಸೂಜಿಕಲ್ ಗುಡ್ಡೆಯಲ್ಲಿ ಒಳಚರಂಡಿ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ ಕಾಪಿಗುಡ್ಡೆಯಲ್ಲಿ ಹೊಸದಾಗಿ ನಿರ್ಮಿಸಲಾದ ಸರ್ಕಾರಿ ಬಾವಿ ಲೋಕಾರ್ಪಣೆಗೊಳಿಸಿದರು.

ಮನಪಾ ಮೇಯರ್ ಮನೋಜ್ ಕುಮಾರ್, ಕಾರ್ಪೋರೇಟರ್ ಗಾಯತ್ರಿ ಎ.ರಾವ್, ಮಂಗಳೂರು ಉತ್ತರ ಮಂಡಲ ಉಪಾಧ್ಯಕ್ಷ ಆನಂದ ಪಾಂಗಳ, ವಾರ್ಡ್ ಬಿಜೆಪಿ ಅಧ್ಯಕ್ಷ ಕೊರಗಪ್ಪ ಶೆಟ್ಟಿ, ಆಕಾಶಭವನ ಕಾರ್ಯದರ್ಶಿ ಜಗದೀಶ ಅಂಚನ್, ಬಿಜೆಪಿ ಉತ್ತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ, ಬೂತ್ ಅಧ್ಯಕ್ಷರಾದ ದಿವಾಕರ ಪೂಜಾರಿ, ಸಚಿನ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಶಾಂತ್ ಪೂಜಾರಿ, ಸಂದೀಪ್ ಶೆಟ್ಟಿ, ವಾರ್ಡ್ ಪ್ರಮುಖರಾದ ಜಯ ನಾಯ್ಕ, ಚೇತನ್ ಕುಲಾಲ್, ಸ್ಥಳೀಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net