

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ದೇವಳದ ಆನುವಂಶೀಯ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ ಎಂ. ನೇತೃತ್ವದಲ್ಲಿ ಚೌಟರ ಅರಮನೆ ಆವರಣದಿಂದ ಆರಂಭಗೊಂಡ ಮೆರವಣಿಗೆಗೆ ಎಡಪದವು ಮುರಳೀಧರ ತಂತ್ರಿಗಳು ಹಾಗೂ ದೇವಳದ ಅರ್ಚಕರು, ಬಸದಿಗಳ ಇಂದ್ರರು ಪ್ರಾರ್ಥನೆ ನೆರವೇರಿಸಿ ದೀಪ ಪ್ರಜ್ವಲಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುವಾರ್ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ವಾರ್ಲಾರ್ಪಣೆಗೈದರು. ಅರಮನೆಯಿಂದ ಹೊರಟ ಮೆರವಣಿಗೆ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಕ್ಷೇತ್ರಕ್ಕೆ ತಲುಪಿತು. ಕಲಶ ಹಿಡಿದ ಮಹಿಳೆಯರು, ಕುಣಿತ ಭಜನಾ ತಂಡ, ಕೊಂಬು, ಚೆಂಡೆಗಳು ಮೆರವಣಿಗೆಗೆ ಮೆರುಗು ನೀಡಿತು.
ಸೋಮನಾಥೇಶ್ವರ, ಮಹಿಷಮರ್ದಿನಿ, ಗಣಪತಿ ಗುಡಿಗಳ ಸುವರ್ಣ ಕಲಶಗಳು ಹಾಗೂ ದೈವದ ಮಂಚವನ್ನು ಅಲಂಕೃತ ವಾಹನಗಳಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ನೂರಾರು ವಾಹನಗಳು ಹೊರೆಕಾಣಿಕೆ ಹೊತ್ತು ಸಾಗಿದವು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುವಾರ್, ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚೌಟರ ಅರಮನೆಯ ವೀರೇಂದ್ರ ಎಂ., ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುದೇಶ್ ಕುವಾರ್, ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳಾದ ಅಮರಶ್ರೀ ಅಮರನಾಥ ಶೆಟ್ಟಿ, ನೀಲೇಶ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ಅಡಿಗಳ್ ಪಿ.ಅನಂತಕೃಷ್ಣ ಭಟ್, ಎಚ್.ಧನಕೀರ್ತಿ ಬಲಿಪ, ಶ್ರೀಕಾಂತ್ ರಾವ್, ಕೆ.ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ, ಜಿ.ಉಮೇಶ ಪೈ, ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಉದ್ಯಮಿಗಳಾದ ಮಿಥುನ್ ಚೌಟರ್, ಮಹೇಂದ್ರವರ್ಮ ಜೈನ್, ಉದ್ಯಮಿ ನಾರಾಯಣ ಪಿ.ಎಂ., ಹರ್ಷವರ್ಧನ್ ಪಡಿವಾಳ್, ಮೇನಾಥ್ ಶೆಟ್ಟಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಉಚಿತ ಬಸ್ ವ್ಯವಸ್ಥೆ
ಬ್ರಹ್ಮಕಲಶೋತ್ಸವ ಅಂಗವಾಗಿ ಮೂಡುಬಿದಿರೆ ಬಸ್ ನಿಲ್ದಾಣದಿಂದ ಪುತ್ತಿಗೆ ಕ್ಷೇತ್ರಕ್ಕೆ ಹೋಗಿ ಬರಲು ಉಚಿತ ಬಸ್ ವ್ಯವಸ್ಥೆಯನ್ನು ಮೂಡುಬಿದಿರೆ ಬಸ್ ಮಾಲೀಕರ ಸಂ ಕಲ್ಪಿಸಿದೆ. ಮಾ.2, 3, 6ರಂದು ಈ ಸೌಲಭ್ಯವಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.