ಸುಬ್ರಹ್ಮಣ್ಯ: ದೇವರಗದ್ದೆಯ ಸಾರ್ವಜನಿಕ ಶ್ರೀ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ಬಳಿ ಸ್ಥಳಾಂತರಿಸಲಾದ ದೇವರಗದ್ದೆ ಮಾನಾಡು ನೂತನ ರಸ್ತೆಯು ಗ್ರಾ.ಪಂ.ವತಿಯಿಂದ ಕಾಂಕ್ರಿಟೀಕರಣಗೊಳ್ಳಲಿದೆ. ಗ್ರಾಮ ಪಂಚಾಯಿತಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಗುದ್ದಲಿಪೂಜೆ ಗುರುವಾರ ನೆರವೇರಿಸಲಾಯಿತು.
ಪುರೋಹಿತ ಶಂಕರ ಭಟ್ ವಿವಿಧ ವೈದಿಕ ವಿಧಿವಿಧಾನ ನೆರವೇರಿಸಿದರು. ಪ್ರಾರ್ಥನೆ ಸಲ್ಲಿಸಿ ಭೂಮಿ ತಾಯಿಗೆ ಪೂಜೆ ನೆರವೇರಿಸಿದರು. ಈ ಕಾಮಗಾರಿಗೆ ಅನುದಾನ ಒದಗಿಸುವಲ್ಲಿ ಶ್ರಮ ವಹಿಸಿದ ಗ್ರಾ.ಪಂ. ಸದಸ್ಯ ಹರೀಶ್ ಎಸ್.ಇಂಜಾಡಿ ಗುದ್ದಲಿಪೂಜೆ ನೆರವೇರಿಸಿದರು.
ಗ್ರಾ.ಪಂ.ಸದಸ್ಯರಾದ ಸವಿತಾ ಭಟ್, ಸೌಮ್ಯಾ ಭರತ್, ವಾಜಿ ಸದಸ್ಯ ಕೃಷ್ಣಮೂರ್ತಿ ಭಟ್, ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಗುತ್ತಿಗೆದಾರ ಅವಿನಾಶ್ ಪಳ್ಳಿಗದ್ದೆ, ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಕಿಶೋರ್ ಅರಂಪಾಡಿ, ದೈವಸ್ಥಾನದ ಪ್ರಮುಖರಾದ ದಿನೇಶ್ ಎಂ.ಆರ್, ತಾರಾನಾಥ್ ಕೋನಡ್ಕ, ಸುಬ್ರಹ್ಮಣ್ಯ ಮಾನಾಡು, ಅಣ್ಣು ದೇವರಗದ್ದೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.