ಗುಬ್ಬಿ ತೋಟದಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ

Oplus_131072
ತಿ.ನರಸೀಪುರ ಪಟ್ಟಣದ ಜಗನ್ಮಾತೆ ಅಕ್ಕಮಹಾದೇವಿ ಉಚಿತ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಟ್ರಸ್ಟಿನ ಸದಸ್ಯರಾದ ಹಿರಿಯ ಗೌರವ ಅಧ್ಯಕ್ಷ ಎನ್.ವಿ.ಶಿವಲಿಂಗಪ್ಪ, ಟ್ರಸ್ಟ್ ಕಾರ್ಯದರ್ಶಿ ಬಸವ ಯೋಗೇಶ್, ಜಿ.ಮರಳ್ಳಿ ಗುರುಪ್ರಸಾದ್, ಕೆರೆಹುಂಡಿ ನಂಜುಂಡಸ್ವಾಮಿ, ಮುದ್ದಹಳ್ಳಿ ಅಶೋಕ್, ನೆಸ್ಲೆ ಸಿದ್ದೇಶ್, ಜ್ಯೋತಿ ಸುರೇಶ್ ಇತರರನ್ನು ಕಾಣಬಹುದು.
Published on

ನಂಜನಗೂಡು: ಪಟ್ಟಣದ ಶ್ರೀ ಗುರುಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾವ್ ಬಹದ್ದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ಸಹಯೋಗದಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಉಚಿತ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.

ನಿವೃತ್ತ ಉಪನ್ಯಾಸಕರಾದ ಕೆಬ್ಬೆಪುರ ಎಚ್.ರಾಜು ಮಾತನಾಡಿ, ಗುಬ್ಬಿ ತೋಟದಪ್ಪನವರು ಅಗಾಧವಾದ ದೂರ ದೃಷ್ಟಿಯಿಂದ ಆಲೋಚಿಸಿ ಶರಣರ ಸಿದ್ಧಾಂತದಂತೆ ಸತ್ಯ ಶುದ್ಧ ಕಾಯಕ ನಿಷ್ಠೆಯಿಂದ ಅಂದಿನ ದಿನದಲ್ಲೇ ವ್ಯಾಪಾರ ವೃತ್ತಿ ಪ್ರಾರಂಭಿಸಿ, ನಂತರ ಸಂಪಾದಿಸಿದ ಎಲ್ಲ ಆಸ್ತಿಯನ್ನು ಸಮಾಜಕ್ಕಾಗಿ ದಾನ ಮಾಡಿರುವ ಬಗ್ಗೆ ಪ್ರಸಂಶಿಸಿದರು. ತಮ್ಮ ಈ ದಾನ ಮನೋಭಾವವು ಸಮಾಜದ ಉನ್ನತ ಏಳಿಗೆಗಾಗಿ ಬಳಕೆಯಾಗಬೇಕೆಂದು ಯೋಚಿಸಿ, ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ತಮ್ಮ ಸಂಪಾದನೆಯ ಎಲ್ಲ ಹಣವನ್ನು ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಜತೆಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವ ಮುಖಾಂತರ ಸೇವೆ ಮಾಡಲು ತಿಳಿಸಿರುವುದು ಹಾಗೂ ಧಾರ್ಮಿಕವಾಗಿಯೂ ಸಂಸ್ಕಾರ ಪಡೆಯುವಂತೆ ತಿಳಿಸಿ, ತಮ್ಮ ಟ್ರಸ್ಟಿನ ಮುಖಾಂತರ ಸಮಾಜಕ್ಕೆ ಕೊಡುಗೆ ಕೊಟ್ಟು ಹೋಗಿದ್ದಾರೆ. ಅದರಂತೆ ನೀವೆಲ್ಲ ಇಂತಹ ಮಹನೀಯರನ್ನು ಅವರ ಕೊಡುಗೆಯನ್ನು ನೆನೆಸಿಕೊಂಡು ಸದುಪಯೋಗ ಪಡೆದು ಮುಂದಿನ ದಿನಗಳಲ್ಲಿ ಗೌರವ ಸ್ಥಾನಮಾನಗಳನ್ನ ಪಡೆಯಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ನಂತರ ಕಾ.ಸು.ನಂಜಪ್ಪ ಮಾತನಾಡಿ, ಶರಣರ ಚಿಂತನೆಯಂತೆಯೇ ಆಲೋಚಿಸಿ, ತಮ್ಮ ಸಂಪಾದನೆಯನ್ನು ದಾಸೋಹ ಭಾವದಿಂದ ನೀಡಿರುವುದು ಸಮಾಜಕ್ಕೆ ದೊಡ್ದ ಕೊಡುಗೆ ಅಂತ ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಗುಬ್ಬಿ ತೋಟದಪ್ಪನವರು 1838ರಲ್ಲಿ ಜನಿಸಿ 1910ರಲ್ಲಿ ನಿಧನ ಹೊಂದುತ್ತಾರೆ. ಇವರು ತಾವು ಸಂಪಾದಿಸಿದ ಆಸ್ತಿಯನ್ನು ಸಮಾಜಕ್ಕೆ ಕೊಡುಗೆ ನೀಡಿರುವುದು ಆಶ್ಚರ್ಯವೇ ಸರಿ. ಆಸ್ತಿಯನ್ನು ಸಂಪಾದಿಸುವುದು ದೊಡ್ಡತನವಲ್ಲ. ಸಂಪಾದಿಸಿದ ಎಲ್ಲ ಆಸ್ತಿಯನ್ನು ಸಮಾಜಕ್ಕೆ ಕೊಡುಗೆ ಕೊಡುವುದು ಬಹಳ ದೊಡ್ಡತನ. ಗುಬ್ಬಿ ತೋಟದಪ್ಪನಂತವರು ಸಮಾಜಕ್ಕೆ ವಿರಳಾತೀತ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರಾದ ಹಿರಿಯ ಗೌರವ ಅಧ್ಯಕ್ಷರು ಎನ್.ವಿ.ಶಿವಲಿಂಗಪ್ಪ, ಟ್ರಸ್ಟ್ ಕಾರ್ಯದರ್ಶಿ ಬಸವ ಯೋಗೇಶ್, ಜಿ.ಮರಳ್ಳಿ ಗುರುಪ್ರಸಾದ್, ಕೆರೆಹುಂಡಿ ನಂಜುಂಡಸ್ವಾಮಿ, ಮುದ್ದಹಳ್ಳಿ ಅಶೋಕ್, ನೆಸ್ಲೆ ಸಿದ್ದೇಶ್, ಜ್ಯೋತಿ ಸುರೇಶ್ ಹಾಗೂ ವಿದ್ಯಾರ್ಥಿ ನಿಲಯದ ಎಲ್ಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net