ಗುಬ್ಬಿಯಲ್ಲೂ ವರುಣಾರ್ಭಟ ರೈಲ್ವೆ ಅಂಡರ್​ಪಾಸ್​ನಲ್ಲಿ ಮುಳಗಿದ ಬಸ್​

Gubbi_Bus
Published on

ತುಮಕೂರು: ಗುಬ್ಬಿ ಪಟ್ಟಣದಲ್ಲೂ ಸಹ ಇಡೀ ರಾತ್ರಿ ನಿರಂತರವಾಗಿ ಮಳೆ ಸುರಿದಿದ್ದು ರೈಲ್ವೆ ಅಂಡರ್​ಪಾಸ್​ ಅಕ್ಷರಷ  ಕೆರೆಯಂತಾಗಿದೆ. ಈ ರೈಲ್ವೆ ಅಂಡರ್​ಪಾಸ್​ ಕೆಳಗೆ ಹಾದು ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ನೀರಿನಲ್ಲಿ ಸಿಲುಕಿ ಪ್ರಯಾಣಿಕರು, ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿಮಾರ್ಣವಾಗಿತ್ತು.

ಗುಬ್ಬಿ-ಚೇಳೂರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಈ ರೈಲ್ವೆ ಅಂಡರ್​ಪಾಸ್​ ಕೆಳಗೆ ಸುಮಾರು 45 ನಿಮಿಷಗಳ ಕಾಲ ಬಸ್​ ಸಿಲುಕಿಕೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅಂಡರ್​ ಪಾಸ್​ ಕೆಳಗೆ ನಿಂತಿದ್ದ ಮಳೆ ನೀರಿನಲ್ಲಿ ಬಸ್​ ಸಿಲುಕಿಕೊಂಡಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ಬಸ್​ನಲ್ಲಿದ್ದ ವಿದ್ಯಾರ್ಥಿಗಳು, ನಿರ್ವಾಹಕರು ಹಾಗೂ ಪ್ರಯಾಣಿಕರನ್ನು ಸುರತವಾಗಿ ಹೊರಬಂದರು.

ಪ್ರತಿ ಬಾರಿಯೂ ಮಳೆ ಬಂದಾಗ ಇದೇ ರೀತಿ ನೀರು ಈ ಅಂಡರ್​ಪಾಸ್​ನಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗುಬ್ಬಿ ಪಟ್ಟಣದ ಬಿ.ಹೆಚ್​. ರಸ್ತೆ, ಸಂತೆಪೇಟೆ, ಬೆಲ್ಲದಪೇಟೆ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ಪ್ರಯಾಸ ಪಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net