

ತುಮಕೂರು: ಗುಬ್ಬಿ ಪಟ್ಟಣದ ಚಿದಂಬರ ಆಶ್ರಮದ ಬಳಿಯ ರೈಲ್ವೆ ಕೆಳಸೇತುವೆ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ಮಾ.26 ರಿಂದ ಏ.10ರವರೆಗೆ ತಾತ್ಕಾಲಿಕವಾಗಿ ರಸ್ತೆ ಬಂದ್ ಮಾಡಲಾಗಿದೆ.
ರೈಲ್ವೆ ಕೆಳಸೇತುವೆ ರಿಪೇರಿ ಕಾಮಗಾರಿ ಕೈಗೊಂಡಿದ್ದು ಬದಲಿ ಮಾರ್ಗವಾಗಿ ಗುಬ್ಬಿ&ಮುದಿಗೆರೆ ಗೇಟ್&ಚೆನ್ನಶೆಟ್ಟಿಹಳ್ಳಿ ಮೂಲಕ ಸಂಚರಿಸುವಂತೆ ಸಾರ್ವಜನಿಕರಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.