ಗ್ಯಾರಂಟಿ ಯೋಜನೆ ಶಿಬಿರ

Published on

ಸುಳ್ಯ: ಸರ್ಕಾರದ ಗ್ಯಾರಂಟಿ ಯೋಜನೆ ಸರ್ವರಿಗೂ ಸಿಗುವಂತಾಗಲು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರ ಉಸ್ತುವಾರಿಯಲ್ಲಿ ಗ್ರಾಪಂಮಟ್ಟದಲ್ಲಿ ಹಮ್ಮಿಕೊಂಡ ವಿಲೇವಾರಿ ಶಿಬಿರ ಆರಂತೋಡು ಗ್ರಾಪಂ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ವಿವಿಧ ಕಾರಣಗಳಿಂದ ಅರ್ಹ ಪಲಾನುಭವಿಗಳು ಗ್ಯಾರಂಟಿಯಿಂದ ವಂಚಿತರಾಗಿದ್ದು ಈ ಬಗ್ಗೆ ಅರ್ಹ ಪಲಾನುಭವಿ, ತಿರಸ್ಕೃತಗೊಂಡ ಪಲಾನುಭವಿಗಳನ್ನು ಗುರುತಿಸಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ದೊರಕುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಪಂ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆ ಪ್ರತಿಯೊಬ್ಬ್ಬ ಪಲಾನುಭವಿಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಪಕ್ಷ ಬೇಧ ಮರೆತು ಜನರ ಬಳಿಗೆ ಯೋಜನೆ ತಲುಪಿಸಬೇಕು ಎಂದರು.

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಲತೀಫ್ ಅಡ್ಕಾರು, ಧನುಷ್ ಕುಕ್ಕೇಟಿ, ಕೇಶವ ಕೊಳಲು ಮೂಲೆ, ತಿಮ್ಮಯ್ಯ ಗೌಡ ತೋಡಿಕಾನ, ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ, ಜುಬೆರ್ ಅರಂತೋಡು, ತಾಜುದ್ದೀನ್ ಅರಂತೋಡು ಸೇರಿದಂತೆ ಪಲಾನುಭವಿಗಳು, ಗ್ಯಾರಂಟಿ ಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net