

ಅರಕಲಗೂಡು: ತಾಲೂಕಿನಲ್ಲಿ ಮಂಗಳವಾರ ಜಿಟಿ ಜಿಟಿ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಶುರುವಾದ ಮಳೆ ಬಿಡುವಿಲ್ಲದೆ ಮಧ್ಯಾಹ್ನದ ವರೆಗೆ ಸುರಿಯಿತು.
ಜಿಟಿ-ಜಿಟಿ ಮಳೆಯಿಂದಾಗಿ ಜನರು ಮನೆಯಿಂದ ಹೊರ ಹೋಗಲು ಹಿಂದೇಟು ಹಾಕುವಂತಾಯಿತು. ಗ್ರಾಮೀಣ ಪ್ರದೇಶದಲ್ಲಿ ರೈತರು ಸುರಿಯುವ ಮಳೆಯನ್ನು ಲೆಕ್ಕಿಸದೆ ಜಮೀನುಗಳತ್ತ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಉತ್ತಮ ಮಳೆಯಿಂದಾಗಿ ಮಳೆಯಾಶ್ರಿತ ಜಮೀನಿನಲ್ಲಿ ರೈತರು ತಂಬಾಕು, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ಮಗ್ನರಾಗಿದ್ದರು. ಕೆಲವು ಕಡೆ ತಗ್ಗು ಪ್ರದೇಶದ ತಂಬಾಕು ನಾಟಿ ಮಾಡಿದ ಜಮೀನಿನಲ್ಲಿ ನಿಂತಿದ್ದ ನೀರು ಹೊರ ಹಾಕಲು ನಿರತರಾಗಿದ್ದರು.