ಬಾಳಗಂಚಿ ಸೊಸೈಟಿಗೆ ಜಿ.ಟಿ.ಮೋಹನ್ ಅಧ್ಯಕ್ಷ

28 HRS 01
ಹಿರೀಸಾವೆ ಹೋಬಳಿ ಬಾಳಗಂಚಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಜಿ.ಟಿ.ಮೋಹನ್ ಅವರನ್ನು ಗುರುವಾರ ಅಭಿನಂದಿಸಲಾಯಿತು. ಪ್ರತಿಭಾ, ಹೇಮಂತ್, ಮಂಜೇಗೌಡ, ಜಗದೀಶ್, ರವಿಕುಮಾರ್ ಇದ್ದರು.
Published on

ಹಿರೀಸಾವೆ: ಹೋಬಳಿಯ ಬಾಳಗಂಚಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗೌಡರಹಳ್ಳಿ ಗ್ರಾಮದ ಜಿ.ಟಿ.ಮೋಹನ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಜಿ.ಟಿ.ಮೋಹನ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಜಿ.ಟಿ.ಮೋಹನ್ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘವು 11 ನಿರ್ದೇಶಕರನ್ನು ಹೊಂದಿದ್ದು ಚುನಾವಣೆ ಸಮಯದಲ್ಲಿ ಎಲ್ಲರೂ ಉಪಸ್ಥಿತರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡ ಜಿ.ಟಿ.ಮೋಹನ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಸಹಕಾರ ಇಲಾಖೆಯ ಹೇಮಚಂದ್ರ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಸಂಘದ ಉಪಾಧ್ಯಕ್ಷೆ ಪ್ರತಿಭಾ, ಮಾಜಿ ಅಧ್ಯಕ್ಷ ಹೇಮಂತ್, ಪ್ರಮುಖರಾದ ಹೊನ್ನಶೆಟ್ಟಿಹಳ್ಳಿ ಮಂಜೇಗೌಡ, ಬಾಳಗಂಚಿ ಜಗದೀಶ್, ಗೌಡರಹಳ್ಳಿ ರವಿಕುಮಾರ್, ಹೋಬಳಿ ವಿವಿಧ ಸಹಕಾರ ಸಂಘಗಳ ಆಡಳಿತ ಮಂಡಳಿಯವರು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು, ಮತ್ತು ಸಂಘದ ನಿರ್ದೇಶಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net