ಶಿಡ್ಲಟ್ಟ: ಕೇಂದ್ರ ಸರ್ಕಾರ ಕೆಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಿದರು.
ನಗರದ ಕೋಟೆ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಟಕದಿಂದ ಆಯೋಜಿಸಿದ್ದ ಜಿಎಸ್ಟಿ ಇಳಿಕೆಯ ಉಡುಗೊರೆಗೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು ೂಷ ವಾಕ್ಯದ ಅಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಕೇಂದ್ರ ಸರ್ಕಾರ ಜಿಎಸ್ಟಿ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ.ದೇಶದ ಇತಿಹಾಸದಲ್ಲಿ ಜಿಎಸ್ಟಿ ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ.ನರೇಂದ್ರ ಮೋದಿ ಅವರು ಈ ಕೆಲಸ ಮಾಡಿ ಬಡ, ಮಧ್ಯಮ ವರ್ಗದ ಜನರಿಗೆ
ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳಿಂದ ಖಜಾನೆ ಖಾಲಿ ಮಾಡಿಕೊಂಡರೆ, ಕೇಂದ್ರದ ಮೋದಿ ಸರ್ಕಾರ ಜಿಎಸ್ಟಿ ಇಳಿಕೆ ಮಾಡಿ ಜನರಿಗೆ ಕೊಳ್ಳುವ ಶಕ್ತಿ, ದೇಶದ ಆರ್ಥಿಕ ಶಕ್ತಿಗೆ ಬಲತುಂಬಿದ್ದಾರೆ. ನವರಾತ್ರಿ ಹಬ್ಬದ ಮೊದಲ ದಿನ ಆರಂಭವಾಗಿದ್ದು, ನವರಾತ್ರಿ ಮೊದಲ ದಿನದಿಂದ ಜಿಎಸ್ಟಿ ಉತ್ಸವ ಆರಂಭವಾಗಿದೆ. ಜಿಎಸ್ಟಿ ಕಡಿಮೆ ಮಾಡಿರುವುದರಿಂದ ನಮ್ಮೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾದಷ್ಟು ಬೇರೆ ದೇಶಗಳ ಮೇಲೆ ನಮ್ಮ ಅವಲಂಬನೆ ಕಡಿಮೆ ಆಗುತ್ತೆ. ಆಗ ಬೇರೆ ದೇಶಗಳು ಯಾವುದೇ ರೀತಿಯ ಬೆದರಿಕೆ ಹಾಕಿದರು ನಾವು ಆರ್ಥಿಕವಾಗಿ
ಸಬಲರಾಗಿಯೇ ಇರುತ್ತೇವೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಸೂರ್ಯನಾರಾಯಣ, ಚಿಂತಾಮಣಿ ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿಗಳಾದ ನಂದೀಶ್, ಅಶೋಕ್, ಹಿರಿಯ ಮುಖಂಡ ಲ್ಮನಾರಾಯಣ್ ಗುಪ್ತ, ರಾಜ್ಯ ಮಹಿಳಾ ಮೋರ್ಚಾ
ಕಾರ್ಯದರ್ಶಿ ನಿರ್ಮಲಮ್ಮ, ತಾಲೂಕು ಮಹಿಳಾ ಟಕದ ಅಧ್ಯೆ ಚಾತುರ್ಯ ಹಾಜರಿದ್ದರು.